ವ್ಯಕ್ತಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಒಂದು ದುರ್ಘಟನೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು 35 ವರ್ಷದ ಶಿವರಾಜ್ ಎತ್ತಿನ ಗುಡ್ಡ ಎಂದು ಗುರುತಿಸಲಾಗಿದೆ. ಕಳೆದ ನವೆಂಬರ್ 16ರಂದು ಶಿವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದರು, ಪ್ರಾರಂಭದಲ್ಲಿ ಗರಗ್ ಪೊಲೀಸ್ ಠಾಣೆಯ ಪೊಲೀಸರು ಇದು ಒಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಡೆತ್ ನೋಟ್ ಶಿವರಾಜನೇ ಬರೆದಿದ್ದು ಎಂದು ಎಫ್ ಎಸ್ ಎಲ್ ವರದಿ ಬಂದ ಹಿನ್ನೆಲೆಯಲ್ಲಿ ಪತ್ನಿ ಸಾವಿಗೆ ಕಾರಣ ಎಂದು ಗರಗ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಶಿವರಾಜ್ ಎತ್ತಿನ ಗುಡ್ಡ ಕಳೆದ 2024ರ ಜುಲೈನಲ್ಲಿ ಮದುವೆಯಾಗಿದ್ದರು, ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಹೈಸ್ಕೂಲ್ ಶಿಕ್ಷಕಿ ಎಲ್ಲವ್ವ ಬೆಂಗೇರಿ ಎಂಬುವವಳ ಜೊತೆ ಮದುವೆಯಾಗಿದ್ದರು. ಮದುವೆಯಾದ 15 ದಿನದಲ್ಲಿ ಎಲ್ಲವ್ವ ತವರು ಮನೆಗೆ ಹೋಗಿದ್ದರು. ಶಿವರಾಜ್ ಆಗ ಪತ್ನಿಗೆ ಮನೆಗೆ ಕರೆ ತರಲು ಸಾಕಷ್ಟು ಪ್ರಯತ್ನ ಮಾಡಿದ್ದರು, ಆದರೆ ಧಾರವಾಡದಲ್ಲಿ ಬೇರೆ ಮನೆ ಮಾಡಿದರೆ ಮಾತ್ರ ನಾನು ವಾಪಸ್ ಬರುತ್ತೇನೆ ಎಂದು ಎಲ್ಲವ್ವ ಹೇಳಿದ್ದರು.
ಮನೆ ಬೇರೆ ಮಾಡಿದರೂ ಪತ್ನಿ ಬರಲೇ ಇಲ್ಲ. ಹೀಗಾಗಿ ನನ್ನ ಸಾವಿಗೆ ನನ್ನ ಪತ್ನಿ ಎಲ್ಲವ್ವ ಳೇ ಕಾರಣ, ನನ್ನ ಸಾವಿನ ನಂತರ ಅವಳಿಗೆ ಶಿಕ್ಷೆ ಆಗಬೇಕು ಎಂದು ಶಿವರಾಜ್ ಡೆತ್ ನೋಟ್ ಬರೆದಿಟ್ಟಿದ್ದರು. ಮದುವೆಯ ನಂತರ ಎಲ್ಲವ್ವ ಸರಿಯಾಗಿ ಜೀವನ ನಡೆಸದೆ ಶಿವರಾಜ್ ನನ್ನು ಬಿಟ್ಟು ತವರು ಮನೆಗೆ ಹೋಗಿದ್ದರು. ಆಸ್ತಿಗಾಗಿ ನನ್ನ ಸಹೋದರನಿಗೆ ಕಿರುಕುಳ ಕೊಟ್ಟಿದ್ದಕ್ಕೆ, ಅವನು ಅಸಹಾಯಕನಾಗಿ ನೇಣು ಹಾಕಿಕೊಂಡಿದ್ದಾನೆ. ಎಂದು ಮೃತ ಶಿವರಾಜ್ ನ ಸಹೋದರಿಯರು ಆರೋಪಿಸುತ್ತಿದ್ದಾರೆ.

ವರದಿ: ಶಿವರಾಜ್ ಪಿ.ಆರ್

Leave a Reply

Your email address will not be published. Required fields are marked *

error: Content is protected !!