ಪತಿ ಶಫಿ ಅಹ್ಮದ್ ವಿರುದ್ಧ ಪತ್ನಿ ಲಕ್ಷ್ಮೀ ಮತಾಂತರ ಮಾಡಿಸಲು ಕಿರುಕುಳ ನೀಡಿದುದಾಗಿ ಆರೋಪ ಮಾಡಿದ್ದಾರೆ. 2014-15 ರಲ್ಲಿ ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದ ಈ ದಂಪತಿ, 2017ರಲ್ಲಿ ಅಧಿಕೃತವಾಗಿ ಮದುವೆಯಾಗಿದ್ದರು. ಆದರೆ, ಬದಲಾಗಿ ಶಫಿ ಸುಳ್ಳು ಹೇಳಿ, “ಅನಿಲ್” ಎಂಬ ಹೆಸರಿನಿಂದ ಮದುವೆಯಾಗಿದ್ದ ಎಂದು ಲಕ್ಷ್ಮೀ ಆರೋಪಿಸಿದ್ದಾರೆ.
ಮದುವೆ ನಂತರ, ಶಫಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಶಫಿ ಮಾನಸಿಕ ಮತ್ತು ಶಾರೀರಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಲಕ್ಷ್ಮೀ ಹೇಳಿದ್ದಾರೆ. ಕಾನೂನು ಕ್ರಮಕ್ಕಾಗಿ ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ಸುಳ್ಳು ಹೇಳಿ ಮದುವೆಯಾದ ಶಫಿ ಅಹ್ಮದ್‌ನಿಂದ ಮುಕ್ತಿಬೇಕಾಗಿದೆ,” ಎಂದು ಲಕ್ಷ್ಮೀ ಮನವಿ ಮಾಡಿದ್ದಾರೆ.