ಬೆಂಗಳೂರು ಚಾಮರಾಜಪೇಟೆಯಲ್ಲಿ ಹಸುವಿನ ಮೇಲೆ ನಡೆದ ಕ್ರೌರ್ಯದ ಘಟನೆ ಮಾಸುವ ಮೊದಲು, ಹುಬ್ಬಳ್ಳಿಯಲ್ಲಿ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ಬಣಗಾರ ಲೇಔಟ್ ಪ್ರದೇಶದಲ್ಲಿ ಏಳು ತಿಂಗಳ ಕರು ಅತ್ಯಂತ ಕ್ರೌರ್ಯಕರ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕರುವಿನ ಹೊಟ್ಟೆ ಬಗೆದ ಸ್ಥಿತಿಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಪಶು ವೈದ್ಯರು ಈ ಬಗ್ಗೆ ಪ್ರತಿಕ್ರಿಯಿಸಿ, “ಎರಡು ತಿಂಗಳ ಕರು ನಿಶಕ್ತಿಯಾಗಿದೆ. ಕರುವಿನ ಸ್ಥಿತಿಯಿಂದ ಪ್ರಾಣಿ ದಾಳಿಯ ಸಂಕೇತ ಕಂಡುಬರುತ್ತದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕರು ಶರಣಪ್ಪ ಬಾರಕೇರ ಎಂಬ ವ್ಯಕ್ತಿಗೆ ಸೇರಿದಾಗಿದೆ. ಈ ಪ್ರಕರಣ ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.