ಜೂಜಿನ ಚಟಕೆ ಬಿದ್ದು ಟೆಕ್ ಉದ್ಯೋಗಿ ಒಬ್ಬನು 18 ಲಕ್ಷ ಮೌಲ್ಯದ ಚಿನ್ನ ಕಳ್ಳತನ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೂರ್ತಿ ಎಂಬ ವ್ಯಕ್ತಿ ಬಿಸಿಎ ಪದವಿ ಪೂರ್ಣಗೊಳಿಸಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಆದರೆ, ಜೂಜಿನ ಚಟ ಪ್ರಾರಂಭವಾಗಿ, ಮೈತುಂಬ ಸಾಲ ಮಾಡಿಕೊಂಡು, ಕೊನೆಗೆ ಕಳ್ಳತನದ ಹಾದಿ ಹಿಡಿದಿದ್ದಾನೆ.
ಸಾಲ ತೀರಿಸಲು, ಬೆಗೂರು ಪ್ರದೇಶದ ಒಂದು ಮನೆಯಲ್ಲಿ ಬೀಗ ಮುರಿದು 18 ಲಕ್ಷ ಮೌಲ್ಯದ ಚಿನ್ನ ಕದ್ದಿದ್ದಾನೆ. ಆದರೆ, ಬೀಗ ಮುರಿದ ಕೃತ್ಯ ಬೆಳಕಿಗೆ ಬಂದ ತಕ್ಷಣ, ಬೆಗೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರು ಆರೋಪಿಯಿಂದ 261 ಗ್ರಾಂ ಚಿನ್ನ (ಮೌಲ್ಯ ₹15 ಲಕ್ಷ) ವಶಪಡಿಸಿಕೊಂಡಿದ್ದಾರೆ. ಮೂರ್ತಿ ಈ ಹಿಂದೆ ರಾಜಗೋಪಾಲ ನಗರ ಮತ್ತು ಸಿ.ಕೆ. ಅಚ್ಚುಕಟ್ಟು ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಾರಿ ಮತ್ತೆ ಬಂಧಿತನಾಗಿ ಪೊಲೀಸರ ಅತಿಥಿಯಾಗಿದ್ದಾನೆ.