ದೇವಲ ಗಾಣಗಾಪೂರ : ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಚೌವಡಾಪುರ ಗ್ರಾಮದಲ್ಲಿ ನಾಲ್ಕು ಜನ ಅಪರಿಚಿತರು ಸಿಬಿಐ ಪೋಲಿಸ್ ಅಧಿಕಾರಿ ಇದ್ದೇವೆ ಎಂದು ಮಟ್ಕಾ ಬರೆದುಕೊಳ್ಳುವ ಯಂಕಪ್ಪ ಎಂಬ ವ್ಯಕ್ತಿಯನ್ನು ಜಿಪಿನಲ್ಲಿ ಹಾಕಿಕೊಂಡು ಮದರಾ ಕ್ರಾಸ ಬಳಿ ವಾಹನ ನಿಲ್ಲಿಸಿ 20,000 ರೂಪಾಯಿ ಕೊಟ್ಟರೆ ಬಿಡುತ್ತೇವೆ ಇಲ್ಲದಿದ್ದರೆ ಜೈಲಿಗೆ ಹಾಕುತ್ತೇವೆ ಹೇದುರಿಸಿದರು ನಂತರ ಸಾರ್ವಜನಿಕರು ಕೂಡಿದ್ದರಿಂದ ಅಪರಿಚಿತ ವ್ಯಕ್ತಿಗಳು ವಾಹನ ಸಮೇತ ಪರಾರಿಯಾಗಿದ್ದರು. ದೇವಲ ಗಣಗಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿತ್ತು. ಪರಾರಿಯಾಗಿದ್ದ ಬಸವರಾಜ್, ಜ್ಞಾನೇಶ್, ಕೃಷ್ಣ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.