ಕಲಬುರಗಿ ನಗರ ಪೊಲೀಸ ಆಯುಕ್ತಾಲಯದ ವ್ಯಾಪ್ತಿಯ ಸಿ.ಸಿ.ಬಿ ಪೊಲೀಸರಿಂದ ಮಿಂಚಿನ ದಾಳಿ. ಕಲಬುರಗಿ ನಗರದ ಎಂ.ಎಸ್.ಕೆ.ಮಿಲ್ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 3 ಜನ ಆರೋಪಿತರಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಬಂಧಿತರಿಂದ 23 ಕೆಜಿ ಅಕ್ರಮ ಗಾಂಜಾ ಅಂದಾಜು ₹ 2,30,000/- ಮೌಲ್ಯದ ಅಕ್ರಮ ಗಾಂಜಾ ಹಾಗೂ 2 ಮೊಬೈಲ್, 1 ಬೈಕ್ ಮತ್ತು ₹ 2800/- ನಗದು ಹಣ ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಕ್ಕಾಗಿ ಮಾನ್ಯ ಪೊಲೀಸ ಆಯುಕ್ತರಾದ ಡಾ.ವೈ.ಎಸ್ ರವಿಕುಮಾರ, ಭಾ.ಪೊ.ಸೇ.ರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.

error: Content is protected !!