ನಮ್ಮ ಕರ್ನಾಟಕ ರಾಜ್ಯದಲ್ಲಿ ಉತ್ತರ ಕರ್ನಾಟಕದ ಮಧ್ಯಭಾಗದಲ್ಲಿರುವ ಛೋಟಾ ಮುಂಬೈ ಎಂದು ಹೆಸರು ಪಡೆದಿರುವ ಹುಬ್ಬಳ್ಳಿಯಲ್ಲಿ ಶಿಸ್ತು ನಿಯಮ ಪಾಲಿಸಬೇಕಾದ ಪೊಲೀಸರೇ ತಪ್ಪು ಮಾಡಿದ್ದು ನಿಜಕ್ಕೂ ಬೇಸರವಾಗುತ್ತಿದೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ಶ್ರೀ ಲಾಭೂರಾಮ್ ರವರು ಹಗಲು ರಾತ್ರಿ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪಾತ್ರರಾಗಿದ್ದರೂ ಕೂಡಾ ಇಂತಹ ಒಂದು ಘಟನೆ ನಡೆಯಬಾರದಾಗಿತ್ತು
ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಅದೂ ಯಾರೂ ನೋಡಿಲ್ಲ ಎಂಬ ಮಾತಿನಂತೆ ಪೊಲೀಸರೇ ಇಸ್ಪಿಟ್ ಆಟ ಆಡಿದರೆ ಏನೂ ಗತಿ.??
ಹುಬ್ಬಳ್ಳಿ ನಗರದ ಗೋಕುಲ್ ರಸ್ತೆಯಲ್ಲಿರುವ ಅಕ್ಷಯ್ ಕಾಲೋನಿಯ ಮನೆಯೊಂದರಲ್ಲಿ 5 ಜನ ಪೋಲೀಸರು ಎಕ್ಕಾ ರಾಜಾ ರಾಣಿ ನನ್ನ ಕೈ ಒಳಗೆ ಎಂದರೇ ಏನ್ ಇದೂ.
ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣೆಯ ಖಡಕ್ ಪೊಲೀಸ್ ಅಧಿಕಾರಿ ( ಸಿಪಿಐ ) ಜೆ ಎಂ ಕಾಲಿಮೀರ್ಚಿ ಅವರಿಗೆ ಹೇಗೊ ಏನೊ ಒಂದು ಮಾಹಿತಿ ಬಂದಿರುತ್ತದೆ ತಕ್ಷಣ ತಮ್ಮ ಇಲಾಖೆಯ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ನೋಡಿದರೆ ಅಲ್ಲಿ ಏನಪ್ಪಾ ಇದು ಎಂಬ ಪರಿಸ್ಥಿತಿ ಉಂಟಾಗಿದೆ

ಶಿಸ್ತು ನಿಯಮ ಪಾಲಿಸಬೇಕಾದ ಪೊಲೀಸರೇ ತಮ್ಮ ಜವಾಬ್ದಾರಿಗಳನ್ನು ಮರೆತು ಜೂಜಾಟದಲ್ಲಿ ತೊಡಗಿದ್ದರು ಆ 5 ಜನ ತಂಡದಲ್ಲಿದ್ದವರು ಪೊಲೀಸರೇ.
ನಗರ ಸಶಸ್ತ್ರ ಮೀಸಲು ಪಡೆಯ ಒಬ್ಬ ಇನ್ಸಪೆಕ್ಟರ್ ಇಬ್ಬರು ಹೆಡ್ ಕಾನ್ಸ್ ಟೇಬಲ್ ಒಬ್ಬ ಕಾನ್ಸ್ ಟೇಬಲ್ ಹಾಗೂ ನಿವೃತ್ತ ಹೆಡ್ ಕಾನ್ಸ್ ಟೇಬಲ್ ಈ ಖತರ್ನಾಕ್ 5 ಜನರು ಗೋಕುಲ್ ರೋಡ್ ಅಕ್ಷಯ ಕಾಲೋನಿಯಲ್ಲಿರುವ ನಂ 337 ರ ಮನೆಯಲ್ಲಿ ತಮ್ಮ ಬಯಕೆಗಳ ಪ್ರಕಾರ ಇಸ್ಪೀಟ್ ಅಡ್ಡೆ ಮಾಡಿಕೊಂಡು ಆಡುತ್ತಿರುವಾಗ ಕಾಲಿಮಿರ್ಚೀ ಸಾಹೇಬರ ತಂಡದವರು 4 ಜನ ಜೂಜುಕೋರರನ್ನೂ ಬಂಧಿಸಿದ್ದಾರೆ
ಸಿಎಆರ್ ನ ಇಬ್ಬರು ಕಾನ್ಸ್ ಟೇಬಲ್ ಒಬ್ಬ ನಿವೃತ್ತ ಕಾನ್ಸ್ ಟೇಬಲ್ ಹಾಗೂ ಸಂಚಾರಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಒಬ್ಬ ಕಾನ್ಸ್ ಟೇಬಲ್ ಈ ನಾಲ್ವರು ಬಂಧಿತರು ಇನ್ನೂ ಸಿಎಆರ್ ನ ಒಬ್ಬ ಇನ್ಸಪೆಕ್ಟರ್ ದಾಳಿ ನಡೆಸಿದಾಗ ತನ್ನ ಖತರ್ನಾಕ್ ಬುದ್ದಿವಂತಿಕೆಯಿಂದ ಪರಾರಿಯಾಗಿದ್ದಾನೆ ಈ ದಾಳಿಯಲ್ಲಿ ಒಟ್ಟು 9 ಸಾವಿರ ಹಣ ಮತ್ತು 5 ಮೊಬೈಲ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಅಲ್ಲದೇ ಕಾಲಿಮಿರ್ಚೀ ಸಾಹೇಬರು ಪರಾರಿಯಾದ ಸಿಎಆರ್ ಇನ್ಸಪೆಕ್ಟರ್ ನನ್ನು ಬಿಡಲ್ಲ ಅವನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸುತ್ತೇನೆ ಎಂದು ಹೇಳಿ ಕಾನೂನು ಕ್ರಮ ಜರುಗಿಸಿದ್ದಾರೆ

ವರದಿ : ಶಿವು ಹುಬ್ಬಳ್ಳಿ .

error: Content is protected !!