ಮುಂಡಗೋಡ : ತಾಲೂಕಿನ ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಗೆ ಹೊಂದಿಕೊಂಡಿರುವ “ಅಮ್ಮಾಜಿ ಕೆರೆ ” ಯ ನೀರು ಸರಾಗವಾಗಿ ಹರಿದು ಹೋಗುವಂತೆ ಸಂಬಂದಿಸಿದ ಇಲಾಖೆಯವರು ಕ್ರಮ ಕೈಗೊಳ್ಳದೆ ಇರುವುದರಿಂದ ಪ್ರತಿ ಬಾರಿ ಮಳೆಯಾದಾಗಾ ಇದೆ ರೀತಿ ನೀರು ನಿಂತು ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದೂ ಈ ಬಗ್ಗೆ ಚಿಕ್ಕ ನೀರಾವರಿ ಇಲಾಖೆ ಹಾಗೂ ಪಿ ಡಬ್ಲ್ಯೂ ಡಿ (PWD ) ಇಲಾಖೆಯವರಿಗೆ ಹಲವಾರು ಬಾರಿ ಗ್ರಾಮಸ್ಥರು ದೂರು ಸಲ್ಲಿಸಲಾಗಿದ್ದರು ಇದುವರೆಗೂ ಯಾವುದೆ ಕ್ರಮ ಕೈಗೊಂಡಿರುವುದಿಲ್ಲ ಇನ್ನಾದರೂ ಸಂಬಂಧ ಪಟ್ಟ ಇಲಾಖೆಯವರು ಗಮನವನ್ನು ಹರಿಸಿ ಕಾಲುವೆ ನಿರ್ಮಿಸಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಿದೆ.
ವರದಿ :ಕುಮಾರ ರಾಠೋಡ