ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಬೆನಾಳ ಎನ್ ಎಚ್ ಗ್ರಾಮದಲ್ಲಿ ಎಸ್ಸಿ ಕಾಲೋನಿಯಲ್ಲಿ ಸಿಸಿ ರಸ್ತೆ ಕಾಣದೆ ಗೊಳಾಡುತ್ತೀರುವ ಗ್ರಾಮದ ಜನರು ಜನಪ್ರತಿನಿಧಿ ಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮದ ಎಲ್ಲಾ ಕಡೆ ಸಿಸಿ ರಸ್ತೆ ನಿರ್ಮಾಣ ಮಾಡುತಿದ್ದರು ಅದು ಕೂಡ ಕಳಪೆ ಕಾಮಗಾರಿ ಆಗಿದ್ದು. ಒಂದೇ ದಿನದಲ್ಲಿ ಕಿತ್ತು ಹೋಗಿದೆ ಅಂದರೆ ಯಾವ ರೀತಿಯಲ್ಲಿ ಕಾಮಗಾರಿ ನಿರ್ಮಾಣ ಮಾಡಿದ್ದಾರೆ ಎಂಬುದು ಅದನ್ನು ನೋಡಿದರೆ ತಿಳಿಯುತ್ತದೆ. ಇನ್ನೂ ಕೆಲವು ಕಡೆ ಅಲ್ಪ ಸ್ವಲ್ಪ ಮಾಡಿದ್ದಾರೆ. ಸರಿಯಾಗಿ ಪೂರ್ತಿ ಸಹ ಕಾಮಗಾರಿ ಕೊನೆಗೊಳಿಸಿಲ್ಲ. ಕೇಳಿದರೆ ಅಷ್ಟೇ ಆರ್ಡರ್ ಆಗಿದೆ ಎಂದು ಉತ್ತರಿಸುತ್ತಾರೆ ಎಂದು ಅಲ್ಲಿನ ಜನರು ಭ್ರಷ್ಟರ ಬೇಟೆ ಪತ್ರಿಕೆಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವರದಿ:ಸಂಗಪ್ಪ ಚಲವಾದಿ