ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾಲಿ ಧನಂಜಯ್ ಹಾಗೂ ಅವರ ಬಹುಕಾಲದ ಗೆಳತಿ ಡಾ. ಧನ್ಯತಾ ಅವರ ವಿವಾಹ ಮಹೋತ್ಸವ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ಕುಟುಂಬದ ಹತ್ತಿರದವರು ಹಾಗೂ ಸ್ನೇಹಿತರು ಭಾಗಿಯಾಗಿರುವ ಈ ಅದ್ಧೂರಿ ಮದುವೆ ಸಮಾರಂಭಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸುವ ನಿರೀಕ್ಷೆಯಿದೆ.

ಹಳದಿ ಶಾಸ್ತ್ರದ ಅದ್ಧೂರಿ ಸಂಭ್ರಮ

ನಿನ್ನೆ (ಫೆಬ್ರವರಿ 14) ಭರ್ಜರಿಯಾಗಿ ಹಳದಿ ಕಾರ್ಯಕ್ರಮ ನೆರವೇರಿದ್ದು, ಧನಂಜಯ್ ಮತ್ತು ಧನ್ಯತಾ ಅವರ ಅರಿಶಿಣ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಚಿತ್ರಗಳು ನೋಡಿದರೆ, ಈ ಜೋಡಿಯ ಖುಷಿಯು ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇಂದು ಆರತಕ್ಷತೆ – ನಾಳೆ ಮದುವೆ ಮಹೋತ್ಸವ

ಇಂದು ಸಂಜೆ (ಫೆಬ್ರವರಿ 15) ಆರತಕ್ಷತೆ ಕಾರ್ಯಕ್ರಮ ಜರುಗಲಿದ್ದು, ಇದಕ್ಕೆ ಸಿನಿಮಾ ಕ್ಷೇತ್ರದ ಅನೇಕ ಗಣ್ಯರು ಆಗಮಿಸಲಿದ್ದಾರೆ. ನಂತರ, ನಾಳೆ (ಫೆಬ್ರವರಿ 16) ಧನಂಜಯ್ ಮತ್ತು ಧನ್ಯತಾ ಪರಸ್ಪರ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಪ್ರವೇಶಿಸಲಿದ್ದಾರೆ.

ಸ್ಯಾಂಡಲ್‌ವುಡ್‌ ತಾರೆಯರ ಹಾಜರಾತಿ

ಈ ಅದ್ಧೂರಿ ವಿವಾಹ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಹಲವಾರು ದೊಡ್ಡ ಸ್ಟಾರ್‌ಗಳು ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ರಶ್ಮಿಕಾ ಮಂದಣ್ಣ, ತೆಲುಗು ಸೂಪರ್‌ಸ್ಟಾರ್‌ಗಳಾದ ಚಿರಂಜೀವಿ, ಅಲ್ಲು ಅರ್ಜುನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆ. ಅವರ ಹಾಜರಾತಿಯಿಂದ ಈ ಮದುವೆ ಸಮಾರಂಭಕ್ಕೆ ಮತ್ತಷ್ಟು ಕಂಗೊಳ ಸೇರುವ ನಿರೀಕ್ಷೆಯಿದೆ.

ಡಾಲಿ ಧನಂಜಯ್‌ ಅವರ ಈ ಹೊಸ ಜೀವನದ ಪ್ರಾರಂಭಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಮಂದಿ ಶುಭಕೋರುತ್ತಿದ್ದಾರೆ!

Related News

error: Content is protected !!