ಹಾವೇರಿ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಸಂಪರ್ಕಿಸುವ ಹಾವೇರಿ ತಾಲೂಕಿನ ಗ್ರಾಮಗಳಿಂದ ಬಳ್ಳಾರಿ ಜಿಲ್ಲೆಯ ಮೈಲಾರ, ಕುರವತ್ತಿ, ದಾವಣಗೆರೆ, ಹೊಳಲು, ಹಿರೇ ಹಡಗಲಿ, ಹೂವಿನ ಹಡಗಲಿ, ಕೂಡ್ಲಗಿ, ಬಳ್ಳಾರಿ, ಮಂತ್ರಾಲಯ ರಾಯಚೂರು ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಗೆ ಸಂಚಾರ ಮಾರ್ಗ ಗುತ್ತಲ ಪಟ್ಟಣದಿಂದ ಮೈಲಾರ ಮಧ್ಯೆ ಇರುವ ತುಂಗಭದ್ರ ನದಿಯ ಸೇತುವೆ ಸುಮಾರು 500 ಮೀ (ಅರ್ಧ ಕಿ ಮೀ) ಇದೆ ಈ ಸೇತುವೆ ಸುಮಾರು 40 ರಿಂದ 45 ವರ್ಷ ಹಳೆಯದಾಗಿದ್ದು.
ಸೇತುವೆ ತಡೆಗೋಡೆಗಳ ಸ್ಥಿತಿ ನೋಡಿದರೆ ಭಯವಾಗುತ್ತದೆ ಅಲ್ಲಲ್ಲಿ ತಡೆಗೋಡೆ ಬಿರುಕು ಬಿಟ್ಟಿವೆ. ಯಾವುದಾದರೂ ವಾಹನ ಆಯಾ ತಪ್ಪಿ ತಡೆಗೋಡೆಗೆ ತಗುಲಿದರೆ ತಡೆಗೋಡೆ ಕುಸಿಯುವುದು ಖಚಿತ. ಅಪ್ಪಿ ತಪ್ಪಿಯೂ ಸೇತುವೆಯಿಂದ ಕೆಳಗೆ ಬಿದ್ದರೆ ಬಿದ್ದವರು ನದಿಯ ಪಾಲಾಗುವುದರಲ್ಲಿ ಎರಡನೇ ಮಾತಿಲ್ಲ. ಇನ್ನು ಸೇತುವೆ ಮೇಲೆ ಅಲ್ಲಲ್ಲಿ ತಗ್ಗು ಗುಂಡಿಗಳಿರುತ್ತವೆ ಮಳೆ ಬಂದಾಗ ಈ ಸೇತುವಯ ಮೇಲೆ ಕೈಯ್ಯಲ್ಲಿ ಜೀವ ಬಿಗಿಹಿಡಿದುಕೊಂಡು ಸಂಚರಿಸಬೇಕು.
ಗುತ್ತಲ ಪಟ್ಟಣದಿಂದ ಮೈಲಾರಕ್ಕೆ ತೆರಳುವಾಗ ಸೇತುವೆಯ ಕೊನೆಗೆ ಎಡ ಭಾಗದಲ್ಲಿ ಮಣ್ಣು ಕುಸಿದಿರುತ್ತದೆ ರಾತ್ರಿ ಸಮಯದಲ್ಲಿ ಗೊತ್ತಾಗದೆ ಬಂದರೇ ದ್ವಿಚಕ್ರ ವಾಹನ ಸವಾರರು ಭೂ ಕುಸಿದ ಸ್ಥಳದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಇಷ್ಟೆಲ್ಲಾ ಸಮಸ್ಯೆಗಳಿರುವ ಸೇತುವೆಯ ಕಡೆ ಸಂಭಂಧ ಪಟ್ಟ ಅಧಿಕಾರಿಗಳು ಯಾಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೋ ತಿಳಿಯುತ್ತಿಲ್ಲ ಇನ್ನೂ ಸುಗಮ ಸಂಚಾರಕ್ಕೆ ಸಂಭಂದಪಟ್ಟ ಅಧಿಕಾರಿಗಳು ಯಾವಾಗ ಸರಿಪಡಿಸುತ್ತಾರೋ ಕಾದು ನೋಡಬೇಕಾಗಿದೆ.
ವರದಿ : ಶಿವರಾಜ್