ಕಿರುತೆರೆಯ ನಟಿಯಾದ ಕಾನಿಷ್ಕ ಸೋನಿ ತನ್ನನ್ನು ತಾನು ಮದುವೆ ಯಾಗಿರುವುದಾಗಿ ಹೇಳಿಕೊಳ್ಳುವ ಮೂಲಕ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ.
ಕಿರುತೆರೆ ಜನಪ್ರಿಯ ಸೀರಿಯಲ್ `ದಿಯಾ ಔರ್ ಬಾತಿ ಹಮ್’ ಖ್ಯಾತಿಯ ನಟಿ ಕಾನಿಷ್ಕಾ ಸೋನಿ ತನ್ನ ಇನ್ ಸ್ಟಾಗ್ರಾಂನ ಪ್ರೊಫೈಲ್ ನಲ್ಲಿ ನನ್ನ ಎಲ್ಲ ಕನಸುಗಳನ್ನು ನಾನೇ ಪೂರೈಸಿಕೊಂಡಿದ್ದಾನೆ ಹಾಗೂ ನನ್ನನ್ನು ನಾನೇ ಹೆಚ್ಚು ಪ್ರೀತಿಸುತ್ತೇನೆ. ನನಗೆ ಯಾವ ಗಂಡಸಿನ ಅವಶ್ಯಕತೆಯಿಲ್ಲ ಹಾಗಾಗಿ ನನ್ನನ್ನು ನಾನೇ ಮದುವೆಯಾಗುತ್ತಿದ್ದೇನೆ ಎಂದು ತಮ್ಮ ಫೋಟೋದ ಕೆಳಗೆ ಈ ರೀತಿ ಬರೆದು ಪೋಸ್ಟ್ ವೊಂದನ್ನು ಹಾಕಿಕೊಂಡಿದ್ದಾರೆ.
View this post on Instagram
ಇನ್ ಸ್ಟಾಗ್ರಾಂನಲ್ಲಿ ಹಾಕಿರುವಂತಹ ಈ ಪೋಸ್ಟ್ ನಲ್ಲಿ ಕಾನಿಷ್ಕಾ ಸೋನಿ ಹಣೆಗೆ ಸಿಂಧೂರ ವನ್ನು ಇಟ್ಟು ಕುತ್ತಿಗೆಯಲ್ಲಿ ಮಂಗಳ ಸೂತ್ರ ವನ್ನು ಧರಿಸಿದ್ದಾರೆ.
ಈ ಪೋಸ್ಟನ್ನು ಕಂಡ ಹಲವರು ಆಕೆ ಕುಡಿದ ಮತ್ತಿನಲ್ಲಿ ಹೀಗೆ ಮಾಡಿರಬೇಕು ಎಂದು ಟೀಕಿಸಿದ್ದರು.
View this post on Instagram
ಇದಕ್ಕೆ ಪುನಃ ವೀಡಿಯೋವೊಂದನ್ನು ಮಾಡಿ ಸ್ಪಷ್ಟನೆ ನೀಡಿರುವ ಕಾನಿಷ್ಕಾ ಸೋನಿ, ತಾನು ತನ್ನನ್ನೇ ತಾನು ಮದುವೆಯಾಗಿರುವುದಾಗಿ ಪುನಃ ಹೇಳಿಕೊಂಡಿದ್ದಾರೆ. ಸದ್ಯ ಈ ವಿಚಾರ ಹಲವರಲ್ಲಿ ಆತಂಕ ಉಂಟು ಮಾಡುವುದಲ್ಲದೆ ಸಾಕಷ್ಟು ಸುದ್ದಿಯಾಗುತ್ತಿದೆ.
ಪ್ರಚಾರದ ಗಿಮಿಕ್. ಸಿನೇಮಾದ ಮಂದಿ ನಖರಾಗಳು ಇಂತಹ ಅನೈಜ ಸುದ್ದಿಯ ಮೂಲ ಆಗಿರುತ್ತದೆ.