
ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಶನ್ (GHMC) ಜಂಟಿ ಆಯುಕ್ತ ಜಾನಕಿರಾಮ್ ತಮ್ಮ ಪತ್ನಿಯೇ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ವರಸಿಗುಡದಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಕ್ರಮ ಸಂಬಂಧದ ಆರೋಪ
ಜಾನಕಿರಾಮ್ ಅವರ ಪತ್ನಿ ಕಲ್ಯಾಣಿ, ಪತಿ ಅನ್ಯಾಯ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದಲ್ಲಿ ಕೆಲವು ದಿನಗಳಿಂದ ಅವರ ಚಲನಚಲನಗಳನ್ನು ಗಮನಿಸುತ್ತಿದ್ದರು. ಜಾನಕಿರಾಮ್ ತನ್ನ ಪತ್ನಿಯನ್ನೂ ಕುಟುಂಬವನ್ನೂ ಕಡೆಗಣಿಸಿ, 20 ವರ್ಷದ ಯುವತಿಯೊಂದಿಗೆ ವಾರಸಿಗುಡದಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಕಲ್ಯಾಣಿಗೆ ದೊರಕಿತು.
ಪತ್ನಿಯಿಂದ ಪತಿ ಮೇಲೆ ದಾಳಿ
ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಲು ಕಲ್ಯಾಣಿ ಇಂದು ಜಾನಕಿರಾಮ್ ವಾಸಿಸುತ್ತಿದ್ದ ಸ್ಥಳಕ್ಕೆ ಕುಟುಂಬಸ್ಥರೊಂದಿಗೆ ದಿಢೀರ್ ದಾಳಿ ಮಾಡಿದರು. ಅಲ್ಲಿ ಪತಿಯನ್ನು ಯುವತಿಯೊಂದಿಗೆ ಇದ್ದುದನ್ನು ಕಂಡ ಪತ್ನಿ ಭಾವುಕರಾಗಿ ರೋಷೋದ್ಗಾರ ವ್ಯಕ್ತಪಡಿಸಿದರು. ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಜಾನಕಿರಾಮ್ ಮತ್ತು ಯುವತಿಗೆ ಗೂಸಾ ನೀಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡು ರಸ್ತೆಯಲ್ಲಿ ನಡೆದಿದ್ದು, ಜನತೆಯ ಕಣ್ಣಾರೆ ನಡೆಯಿತು.
ಪೊಲೀಸರು ಸ್ಥಳಕ್ಕೆ ಧಾವನೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವರಸಿಗುಡ ಪೊಲೀಸರು ಸ್ಥಳಕ್ಕೆ ಧಾವಿಸಿ, ಜಾನಕಿರಾಮ್ ಹಾಗೂ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಜಾನಕಿರಾಮ್ ಪತ್ನಿ ಏನಾದರೂ ಅಧಿಕೃತ ದೂರು ನೀಡಿದ್ದಾರಾ ಎಂಬುದರ ಕುರಿತು ಪೊಲೀಸರು ಮಾಹಿತಿ ನೀಡಿಲ್ಲ.
ಸದ್ಯ ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಜಾನಕಿರಾಮ್ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗುತ್ತಾ ಎಂಬುದನ್ನು ನೋಡಬೇಕಾಗಿದೆ.