ಬೆಳಗಾವಿ: ಕೆಲವು ತಿಂಗಳುಗಳ ಹಿಂದೆ ಎಸ್ ಸಿ ಕೋಟಾದಲ್ಲಿ ಡಿ ದರ್ಜೆಯ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ನಿವಾಸಿಯಾದ ಸಂತೋಷ್ ಹವಳೆವ್ವಗೋಳ ಎಂಬಾತನ ಬಳಿ 4ಲಕ್ಷ ರೂಪಾಯಿಗಳನ್ನು ಮೂಡಲಗಿ ತಾಲೂಕಿನ ಹಾಳೂರ ಗ್ರಾಮದ ಸ್ವಾಮೀಜಿ ಅಲ್ಲಮ ಪ್ರಭು ಹಿರೇಮಠ ಪಡೆದಿರುತ್ತಾನೆ. ಕೆಲಸ ಸಿಗದೆ ಇದ್ದಾಗ ಸಂತೋಷ್ ಆಗಸ್ಟ್ ೧೫ ರಂದು ಹಣ ವಾಪಾಸ್ ಕೇಳಿರುತ್ತಾನೆ.
ಈ ಸಂದರ್ಭದಲ್ಲಿ ಸ್ವಾಮೀಜಿಯು ತನ್ನ ಸ್ನೇಹಿತರೊಂದಿಗೆ ಸೇರಿ ಸಂತೋಷನ ಬೆನ್ನಿಗೆ ಮತ್ತು ಕಾಲಿಗೆ ಚಾಕುವಿನಿಂದ ಚುಚ್ಚಿ ಗಾಯ ಮಾಡಿರುತ್ತಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಲ್ಲಮ ಪ್ರಭು ಹಿರೇಮಠ ನನ್ನು ಬಂಧಿಸಿದ್ದಾರೆ.
ಈ ವಿಚಾರದ ಬೆನ್ನಲ್ಲೇ ಈ ಸ್ವಾಮೀಜಿ ಬೆಂಗಳೂರಿನ ಬಿಬಿಎಂಪಿ ಚುನಾವಣೆಯನ್ನು ಹ್ಯಾಕ್ ಮಾಡಿ ಗೆಲ್ಲಿಸುವುದಾಗಿ 5ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿರುವ ವಿಚಾರವೂ ಸಹ ಬೆಳಕಿಗೆ ಬಂದಿದೆ.