ಶಿರಸಿ : ಜಿಂಕೆಯನ್ನು ಹತ್ಯೆಗೈದು ಅದರ ಕೊಂಬು, ಕೋಡು ಹಾಗೂ ಮಾಂಸವನ್ನು ಹಣದಾಸೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ತಂಡದ ಮೇಲೆ ಖಚಿತ ಮಾಹಿತಿಯನ್ನು ಮೇರೆಗೆ ಬನವಾಸಿ ಅರಣ್ಯ ಅಧಿಕಾರಿಗಳು ಧಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಪ್ರಕರಣದ ಮತ್ತೋರ್ವ ಆರೋಪಿ ನಾಪತ್ತೆ ಯಾಗಿರುವ ಘಟನೆ ಬನವಾಸಿ ಹೋಬಳಿಯ ಕಾನಕೊಪ್ಪದಲ್ಲಿ ನಡೆದಿದೆ.

ಆರೋಪಿಗಳಾದ ಪರಮೇಶ್ವರ ಮಾದೇವ ಮಡಿವಾಳ ಕಾನಕೊಪ್ಪ ಹಾಗೂ ಶಿವಪ್ಪ ಬಸ್ಯಾ ಗೌಡ ಕಾನಕೊಪ್ಪ ಎಂಬುವವರನ್ನು ಬನವಾಸಿ ಅರಣ್ಯ ಅಧಿಕಾರಿಗಳು ಬಂಧಿಸಿದ್ದು ಇನ್ನೋರ್ವ ಆರೋಪಿ ಶಿವರಾಂ ತಿಮ್ಮಾ ನಾಯ್ಕ ಕೆಳಗಿನ ಬ್ಯಾಗದ್ದೆ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಈ ಮೂವರು ಆರೋಪಿಗಳು ಸೇರಿ ಆಗಸ್ಟ್ 17 ರ ಬೆಳಗಿನ ಜಾವ ಜಿಂಕೆಯನ್ನು ಕೊಂದು ಅದರ ಕೊಂಬು ಹಾಗೂ ಮಾಂಸ ಸೇರಿ ಇನ್ನಿತರ ವಸ್ತುಗಳನ್ನು ಮಾರಾಟ ಮಾಡಿ ಹಣಗಳಿಸಲು ಸಂಚು ರೂಪಿಸಿದ್ದರು.

ಈ ಕುರಿತು ಖಚಿತ ಮಾಹಿತಿಯ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಜಿ ಆರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ್ ಅಲ್ಲಿಗೂರ್ ಇವರ ಮಾರ್ಗದರ್ಶನದಲ್ಲಿ ಬನವಾಸಿ ವಲಯ ಅರಣ್ಯಾಧಿಕಾರಿ ಉಷಾ ಕಬ್ಬೇರ್, ಸಿಬ್ಬಂದಿಗಳಾದ ಮಹೇಶ್ ಅಜೇರ್, ರಮೇಶ್ ಎಚ್ ಸಿ, ಮಧುಕೇಶ್ವರ ನಾಯ್ಕ ಪಾಲ್ಗೊಂಡಿದ್ದು ಆರೋಪಿಗಳಿಂದ ಜಿಂಕೆ ಮಾಂಸ ಹಾಗೂ ಕೃತ್ಯಕ್ಕೆ ಬೆಳೆಸಲಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!