ಬಾಗಲಕೋಟೆ ತಾಲೂಕಿನ ನಾಯನೇಗಲಿ ಗ್ರಾಮದಲ್ಲಿ ಶ್ರೀ ಹರಳೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಕೊರತೆ ಮತ್ತು ಕೆಲವು ಶಿಕ್ಷಕರು ಸರಿಯಾಗಿ ಪಾಠ ಬೋಧನೆ ಮಾಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹರಳೇಶ್ವರ ಪ್ರೌಢ ಶಾಲೆಯು ಅನುದಾನಿತ ಶಾಲೆಯಾಗಿದ್ದು ಇಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಅಲ್ಲೇ ಪ್ರತಿಭಟನೆಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಯನ್ನು ಕೇಳಿದಾಗ ನಮಗೆ ಕನ್ನಡ, ಗಣಿತ ವಿಷಯಕ್ಕೆ ಮಾತ್ರ ಶಿಕ್ಷಕರಿದ್ದು ಇನ್ನುಳಿದ ವಿಷಯಗಳಿಗೆ ಶಾಶ್ವತ ಶಿಕ್ಷಕರಿಲ್ಲ ಎಂಬುದಾಗಿ ತಿಳಿಸಿದರು. ಈ ಹರಳೇಶ್ವರ ಪ್ರೌಢ ಶಾಲಾ ಸಂಸ್ಥೆಯ ಅಧ್ಯಕ್ಷ ಅದೆಲ್ಲೋ ಕುಳಿತು ತನ್ನ ಸಂಸ್ಥೆಯನ್ನು ನಡೆಸುತ್ತಿದ್ದಾನೆ. ಒಂದು ಸಂಸ್ಥೆಯ ಅಧ್ಯಕ್ಷ ಎಂಬುದನ್ನೇ ಮರೆತು ಬೇಕಾಬಿಟ್ಟಿಯಾಗಿ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾನೆ. ಈ ಸಂಸ್ಥೆಯ ಅಧ್ಯಕ್ಷನಾಗಿ ಶಾಲೆಗೆ ಒಂದು ದಿನ ಕಾಲಿಟಿಲ್ಲ ಮತ್ತು ವಿದ್ಯಾರ್ಥಿಗಳ ಕುಂದು ಕೊರತೆ ಬಗ್ಗೆ ಆಲಿಸಿಲ್ಲ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿಚಾರ ತಿಳಿಸಿದರು ಸಹ ಅವರು ಕೂಡ ನಿಸ್ಸಹಾಯಕರಾಗಿದ್ದಾರೆ.
ಈ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಕೆ.ಕಂದಗಲ್ ರವರು ಮಾತನಾಡಿ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಿ ಕೊಡುವ ಕೆಲಸವನ್ನು ಮಾಡುತ್ತೇವೆಂದು ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಿದರು.

ವರದಿ- ಮುತ್ತಪ್ಪ ಬಡಿಗೇರ

error: Content is protected !!