ಬೆಳಗಾವಿಯಲ್ಲಿ ಶಾಕಿಂಗ್ ಘಟನೆ ಬೆಳಕಿಗೆ ಬಂದಿದ್ದು, ಅಪ್ರಾಪ್ತ ಬಾಲಕಿಯ ವಿವಾಹಕ್ಕೆ ಸ್ವತಃ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರೇ ಕೈಜೋಡಿಸಿರುವ ಮಾಹಿತಿಯಾಗಿದೆ. ಬೆಳಗಾವಿ ವಿಭಾಗದ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ರವೀಂದ್ರ ಗಡಾಡಿ ಅವರು, ತಮ್ಮ ಸಂಬಂಧಿಯೊಂದಿಗೆ ಬಾಲಕಿಯನ್ನು ವಿವಾಹ ಮಾಡಿಸಿದ್ದಾಗಿ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

ಅಪ್ರಾಪ್ತೆಯ ವಯಸ್ಸು ತಿದ್ದುಪಡಿ ಮಾಡಿಸಿ ವಿವಾಹ

ಬಾಲಕಿಯ ಮೂಲ ಜನ್ಮ ದಿನಾಂಕ ಜೂನ್ 1, 2008 ಆಗಿದ್ದರೂ, ಅಧಿಕಾರಿ ಆಧಾರ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸಿ ಅದನ್ನು ಜೂನ್ 1, 2002 ಆಗಿ ಬದಲಾಯಿಸಿ, 2022ರಲ್ಲಿ ಮದುವೆ ಮಾಡಿಸಿದ್ದಾಗಿ ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವಿವಾಹ ಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿರುವ ಖಾಸಗಿ ಫಾರ್ಮ್‌ಹೌಸ್‌ನಲ್ಲಿ ನಡೆದಿತ್ತು.

ಮಗುವಿಗೆ ಜನ್ಮ ನೀಡಿದ ಬಾಲಕಿ

ಮೂರು ತಿಂಗಳ ಹಿಂದಷ್ಟೇ ಈ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಮೂಲಕ ಓದುವ ವಯಸ್ಸಿನಲ್ಲಿ ಇತರರ ಪ್ರಭಾವದಿಂದ ಬಾಳಿಗೇ ಬಲಿಯಾಗಬೇಕಾದ ಸ್ಥಿತಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಕೈಗೆತ್ತಿಕೊಳ್ಳಬಹುದಾದ ಸಾಧ್ಯತೆ ಇದ್ದು, ಐಪಿಎಸ್ ಅಧಿಕಾರಿಯ ಭಾಗವಹಿಸುವಿಕೆ ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳುವಂತೆ ಹಕ್ಕು ಸಮಿತಿ ಮತ್ತು ಮಹಿಳಾ ಹಕ್ಕು ಸಂಘಟನೆಗಳು ಒತ್ತಾಯಿಸುತ್ತಿವೆ.

ಈ ಸಂಬಂಧ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದ್ದು, ಹೆಚ್ಚಿನ ಮಾಹಿತಿ ಹೊರಬಿದ್ದರೆ ಹೆಚ್ಚಿನ ಕಾನೂನು ಕ್ರಮ ಮತ್ತು ತನಿಖೆ ಆರಂಭವಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!