
ಕುಂದಗೋಳ: ಸಾಲಗಾರರ ಕಾಟದಿಂದ ಬೇಸತ್ತು ಯುವಕನೊಬ್ಬ ಮನನೊಂದು ಕಳೆನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಂದಗೋಳ ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಕುಂದಗೋಳ ಪಟ್ಟಣದ ನಿವಾಸಿ ಸುನೀಲ ಹೆೇಮಣ್ಣ ಪಾತ್ರೋಟಿ (26) ಎಂಬ ಯುವಕ ತಮ್ಮ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಎಂಬ ಕಾರಣದಿಂದ ಚಿಕಿತ್ಸೆಗೆ ಅಂತ 2023ರಲ್ಲಿ ಆರೋಪಿತ ನಾದ ಸಂತೋಷ ಸಿದ್ದಪ್ಪ ಮುಳ್ಳೂಳ್ಳಿ ಇವರಿಂದ 40 ಸಾವಿರ ರೂಪಾಯಿ ಕೈಗಡ ಸಾಲವನ್ನು ತೆಗೆದುಕೊಂಡಿರುತ್ತಾನೆ. ನಾಲ್ಕು ತಿಂಗಳ ಬಳಿಕ ಸಾಲ ಪಡೆದ ತಂದೆ ತೀರಿ ಹೋಗಿರುತ್ತಾರೆ. ಸಾಲಗಾರರು ಮರಳಿ ಹಣವನ್ನು ಕೂಡು ಎಂತು ಕೇಳಿದಾಗ ಸ್ವಲ್ಪ ದಿನ ನಂತರ ಕೊಡುತ್ತೇನೆ ಎಂದು ಸುನೀಲ್ ಹೇಳಿರುತ್ತಾನೆ.
ಬಳಿಕ 2024 ರ ಅಗಸ್ಟ್ ರಂದು 4 ಆರೋಪಿಗಳು ಸೇರಿಕೊಂಡು ಸುನೀಲ ಪಾತ್ರೋಟಿ ಇವರ ಮನೆಯ ಮುಂದೆ ಹೋಗಿ 30 ಸಾವಿರ ರೂಪಾಯಿಗೆ ಬಡ್ಡಿ ಸೇರಿ 1,80 ಸಾವಿರ ಆಗಿದೆ ಎಂದು ಕಿರುಕುಳ ಕೊಟ್ಟಿದ್ದಕ್ಕೆ ಸಾಲಗಾರ ಸುನೀಲ ಆರೋಪಿತ ನಾದ ಸಂತೋಷ ಸಿದ್ದಪ್ಪ ಮುಳ್ಳೂಳ್ಳಿ ಇವನಿಗೆ ಪ್ರತಿವಾರ ಪೋನ್ ಫೇ ಹಾಗೂ ಕೈಗಡ 5 ಸಾವಿರ ರೂಪಾಯಿ ನೀಡುತ್ತ ಬಂದಿರುತ್ತಾನೆ.
ಇದಲ್ಲದೆ ಸಾಲ ತೀರಿಲ್ಲ ಎಂದು ಬೆಟದೂರ ರಸ್ತ ಬಳಿ ಸಂತೋಷ ಮೂಳ್ಳೂಳ್ಳಿ, ಜತೆ ಶಿವು ಮೂಳ್ಳೂಳ್ಳಿ, ಪ್ರವೀಣ ಮುದೆಣ್ಣವರ, ಪ್ರಕಾಶ ಮೂಳ್ಳೂಳ್ಳಿ, ಸೇರಿಕೂಂಡು ಸುನೀಲ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿ ಕಾರನ್ನು ತೆಗೆದುಕೊಂಡು ಹೋಗಿರುತ್ತಾರೆ. ಇದರಿಂದಾಗಿ ಮನನೊಂದು ಸುನೀಲ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯುತ್ನಿಸಿದ್ದಾನೆ. ಈ ಕುರಿತು ಕುಂದಗೋಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.