
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಜಾರಿ ಮಾಡಿದ್ದ ಸಮನ್ಸ್ ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಇಬ್ಬರಿಗೂ ಮಹತ್ವದ ರಿಲೀಫ್ ನೀಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಅಧ್ಯಕ್ಷತೆಯ ಪೀಠ ವಾದ-ಪ್ರತಿವಾದಗಳನ್ನು ಆಲಿಸಿ, ಭೈರತಿ ಸುರೇಶ್ ಮತ್ತು ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರಿಗೆ ಇಡಿ ನೀಡಿದ್ದ ಸಮನ್ಸ್ ರದ್ದುಗೊಳಿಸಲು ಆದೇಶ ನೀಡಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯನವರು ಇಡಿ ತನಿಖೆಯಿಂದ ಮುಕ್ತರಾಗಿದ್ದಾರೆ. ಅಲ್ಲದೇ, ಮುಡಾ ಹಗರಣ ಸಂಬಂಧ ಅವರಿಗೆ ದೊಡ್ಡ ಜಯವಾಗಿಯೂ ಪರಿಗಣಿಸಲಾಗಿದೆ.
ಇತ್ತೀಚೆಗೆ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದಿತ್ತು. ಅದರಿಂದ ಸಿಎಂ ಸಿದ್ದರಾಮಯ್ಯಗೆ ತೀವ್ರ ರಿಲೀಫ್ ಸಿಕ್ಕಿತ್ತು. ಇದೀಗ ಅವರ ಪತ್ನಿ ಪಾರ್ವತಿ ಮತ್ತು ಆಪ್ತ ಸಹೋದ್ಯೋಗಿ, ಸಚಿವ ಬೈರತಿ ಸುರೇಶ್ ಕೂಡ ಹೈಕೋರ್ಟ್ ಆದೇಶದಿಂದ ದೊಡ್ಡ ರಿಲೀಫ್ ಪಡೆದಿದ್ದಾರೆ.