ಬಾಗಲಕೋಟೆ: ನಗರದಲ್ಲಿ ಕುಮಾರೇಶ್ವರ ಆಸ್ಪತ್ರೆ ಹತ್ತಿರದಲ್ಲಿರುವ ಪೆಟ್ರೋಲ್ ಬಂಕ್ ಹಾಗೂ ರಾಯಲ್ ಎನ್ ಫೀಲ್ಡ್ ಬೈಕ್ ಶೋ ರೂಮ್ ಬಳಿ ಬೈಕ್ ಗೆ ಬಸ್ಸು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ರಾತ್ರಿ 9 ಗಂಟೆಗೆ ನಡೆದಿದೆ.
ಬೈಕ್ ಸವಾರ ತನ್ನಷ್ಟಕ್ಕೆ ತಾನು ಪೆಟ್ರೋಲ್ ಹಾಕಿಸಿಕೊಂಡು ಚಲಿಸುತ್ತಿರಬೇಕಾದರೆ ಬೀಳಗಿಯಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರು ತಲುಪುವ ಕರ್ನಾಟಕ ಸಾರಿಗೆ ಬಸ್ಸು ಧೀಡಿರನೆ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ಇಂದು ನಡೆದಿದೆ. ಬೈಕ್ ಸವಾರ ಬಾಗಲಕೋಟೆ ನಗರದ ನಿವಾಸಿಯೇ ಇರಬಹುದು ಎಂದು ತಿಳಿದು ಬಂದಿದೆ.
ಕೂಡಲೇ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವರದಿ: ವಿಶ್ವನಾಥ ಭಜಂತ್ರಿ