
ಮುಂಬೈನ ಪೊವೈ ಪ್ರದೇಶದ ಹೋಟೆಲ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿರುವ ಪೊಲೀಸರು, ನಾಲ್ವರು ನಟಿಯರನ್ನು ರಕ್ಷಿಸಿ, ಪ್ರಮುಖ ಆರೋಪಿ ಶ್ಯಾಮ್ ಸುಂದರ್ ಅರೋರಾವನ್ನು ಬಂಧಿಸಿದ್ದಾರೆ.
ಗೌಪ್ಯ ಮಾಹಿತಿ ಆಧಾರಿತ ದಾಳಿ
ಖಚಿತ ಮಾಹಿತಿ ಮೇರೆಗೆ ಮುಂಬೈ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿ ಅರೋರಾ ನಟಿಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಈ ಜಾಲದಲ್ಲಿ ಸಿಲುಕಿದ್ದ ಸಂತ್ರಸ್ತೆಯರಲ್ಲಿ ಒಬ್ಬರು ಹಿಂದಿ ಧಾರಾವಾಹಿ ನಟಿಯಾಗಿದ್ದಾರೆ.
ಕಾನೂನು ಕ್ರಮ:
ಈ ಸಂಬಂಧ ಭಾರತೀಯ ದಂಡ ಸಂಹಿತೆ ಮತ್ತು ಸಂಬಂಧಿತ ಕಾನೂನುಗಳಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.