ಮುಂಡಗೋಡ: ತಾಲೂಕಿನ ಮಳಗಿ ಹತ್ತಿರದಲ್ಲಿರುವ ಜವಾಹರ್ ನವೋದಯ ವಿದ್ಯಾಲಯ ಪಂಚವಟಿಗೆ ವಿಧಾನಪರಿಷತ್ ಸದಸ್ಯರಾದ ಶಾಂತಾರಾಮ್ ಸಿದ್ದಿಯವರು ಭೇಟಿ ನೀಡಿ ಚರ್ಚಿಸಿದರು.
ಹೊಸದಾಗಿ ಆಯ್ಕೆಯಾದ ಪಾಲಕ ಶಿಕ್ಷಕ ಸಮಿತಿಯ (PTC) ಅಧ್ಯಕ್ಷರಾದ ಪ್ರಕಾಶ್ ಅಜ್ಜಂನವರ ವಿಧಾನಪರಿಷತ್ ಸದಸ್ಯರಾದ ಶಾಂತಾರಾಮ್ ಸಿದ್ಧಿ ಅವರಿಗೆ ಕರೆ ಮಾಡಿ ವಿದ್ಯಾಲಯಕ್ಕೆ ಖುದ್ದು ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸುವಂತೆ ಕೇಳಿಕೊಂಡಿದ್ದರು. ಈ ವಿಷಯವಾಗಿ ವಿಧಾನಪರಿಷತ್ ಸದಸ್ಯರಾದ ಶಾಂತಾರಾಮ್ ಸಿದ್ಧಿ ಅವರು ಇಂದು ಜವಾಹರ್ ನವೋದಯ ವಿದ್ಯಾಲಯ ಪಂಚವಟಿಗೆ ಭೇಟಿ ನೀಡಿ ಶೈಕ್ಷಣಿಕ ವಿಚಾರಗಳ ಕುರಿತು ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಿದರು .
ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಈ ನವೋದಯ ವಿದ್ಯಾಲಯವು ಸುಮಾರು 35 ವರ್ಷಗಳ ಹಿಂದೆ ಪ್ರಾರಂಭಗೊಂಡಿದ್ದು ಅಂದು ನಿರ್ಮಾಣಗೊಂಡಿರುವ ಕೊಠಡಿಗಳು ಹಾಗೂ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳ ಮೇಲ್ಚಾವಣಿ ಶಿಥಿಲಗೊಂಡು ಮಳೆಗಾಲದಲ್ಲಿ ಸೋರುತ್ತಿರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತೀದೆ.ಹಾಗಾಗಿ ಸದ್ಯ ಅವುಗಳಿಗೆ ತಗಡಿನ ಶೆಡ್ ನಿರ್ಮಾಣ ಮಾಡುವಂತೆ ಹಾಗೂ ಮಳೆಗಾಲದಲ್ಲಿ ಮಕ್ಕಳಿಗೆ ಬಿಸಿ ನೀರಿನ ಸಮಸ್ಯೆ ಆಗುತ್ತಿದೆ ,ಬಾಲಕರ ಶೌಚಾಲಯಗಳು ಅವ್ಯವಸ್ಥೆಯಿಂದ ಕೂಡಿದ್ದುಇವುಗಳನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸುವಂತೆ ಪಾಲಕ ಶಿಕ್ಷಕ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಅಜ್ಜಂನವರ ಹಾಗೂ ಸದಸ್ಯರು ವಿಧಾನಪರಿಷತ್ ಸದಸ್ಯರ ಬಳಿ ಮನವಿ ಪತ್ರ ನೀಡುವುದರೊಂದಿಗೆ ವಿನಂತಿಸಿಕೊಂಡರು.ಹಾಗೂ ತಮ್ಮ ಅನುದಾನದಲ್ಲಿ ಸಭಾಹಾಲ್ ನಿರ್ಮಾಣ ಮಾಡಿಕೊಡುವಂತೆ ಕೇಳಿಕೊಂಡರು.ಎಲ್ಲ ಸಮಸ್ಯೆಗಳನ್ನು ಆಲಿಸಿದ ಎಂಎಲ್ಸಿ ಅವರು ಈ ವಿಷಯಗಳ ಕುರಿತು ,ಜಿಲ್ಲೆಯ ಉಸ್ತುವಾರಿ ಮಂತ್ರಿಗಳೊಂದಿಗೆ,ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಅವರೊಂದಿಗೆ,ಜಿಲ್ಲಾಧಿಕಾರಿಗಳೊಂದಿಗೆ,ತಹಸಿಲ್ದಾರ ಅವರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸುವ. ಪ್ರಯತ್ನ ಮಾಡುತ್ತೇನೆ ಎಂದರು.ಹಾಗೂ ಜಿಲ್ಲಾಧಿಕಾರಿಗಳಿಗೆ ಖುದ್ದು ಭೇಟಿಕೊಡಲು ತಿಳಿಸುತ್ತೇನೆ ಎಂದು ಹೇಳಿದರು.ಮತ್ತು ಸಂದರ್ಭದಲ್ಲಿ ಪಾಲಕ ಶಿಕ್ಷಕ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಅಜ್ಜಂನವರ, ಪ್ರಾಂಶುಪಾಲರಾದ ಜೋಶ್ ಕಿರಿಯನ್,ಉಪಪ್ರಾಂಶುಪಾಲರಾದ ಹುಬ್ಬಳ್ಳಿ ಹಾಗೂ ಪಾಲಕ ಶಿಕ್ಷಕ ಸಮಿತಿಯ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು .
ವರದಿ :ಮಂಜುನಾಥ ಹರಿಜನ.