ಇಸ್ಲಾಮಾಬಾದ್‌ನ ಸೆಕ್ಟರ್ ಎಫ್-11ನಲ್ಲಿರುವ “ಸ್ಕ್ಯಾಮ್ ಸೆಂಟರ್” ಮೇಲೆ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ (FIA) ಮತ್ತು ಗುಪ್ತಚರ ಏಜೆನ್ಸಿ ದಾಳಿ ನಡೆಸಿದ್ದು, ಸ್ಥಳೀಯ ಯುವಕರು ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಇತರ ಉಪಕರಣಗಳನ್ನು ದೋಚಿ ಪರಾರಿಯಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದಾಳಿಯ ವೇಳೆ ಲೂಟಿ, ಅಧಿಕಾರಿಗಳ ನಿರ್ವಹಣೆಯ ಬಗ್ಗೆ ಪ್ರಶ್ನೆ
ವಿಡಿಯೋಗಳಲ್ಲಿ ಯುವಕರ ಗುಂಪು ಸ್ಕ್ಯಾಮ್ ಸೆಂಟರ್‌ಗೆ ನುಗ್ಗಿ ತಂತ್ರಜ್ಞಾನ ಉಪಕರಣಗಳನ್ನು ಹೊತ್ತೊಯ್ಯುವ ದೃಶ್ಯ ಸೆರೆಯಾಗಿದೆ. ಈ ಘಟನೆಯು ಅಧಿಕಾರಿಗಳ ಕಾರ್ಯಾಚರಣೆ ಪ್ರಕ್ರಿಯೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಂತಾರಾಷ್ಟ್ರೀಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ದಾಳಿ
The Nation ವರದಿ ಪ್ರಕಾರ, FIAನ ಸೈಬರ್ ಕ್ರೈಮ್ ಸೆಲ್ ಶನಿವಾರ (ಮಾರ್ಚ್ 15) ಅಂತರಾಷ್ಟ್ರೀಯ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಈ ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿತು. ಈ ಕೇಂದ್ರದಲ್ಲಿ ವಿದೇಶಿಯರು ಸೇರಿದಂತೆ 24ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿದ್ದರು. ಕೆಲವರು ಸ್ಥಳದಿಂದ ತಪ್ಪಿಸಿಕೊಂಡಿದ್ದರೆ, ಇತರರನ್ನು ಬಂಧಿಸಿ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.

ವಂಚನಾ ಚಟುವಟಿಕೆಗೆ ಸಂಬಂಧಿಸಿದ ತನಿಖೆ ಮುಂದುವರಿಯುತ್ತಿದೆ
FIA ಮೂಲಗಳ ಪ್ರಕಾರ, ಈ ಕಾಲ್ ಸೆಂಟರ್‌ನಲ್ಲಿ ಅನಧಿಕೃತ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಇರಲಿದ್ದು, ಉನ್ನತ ಅಧಿಕಾರಿಗಳ ಅನುಮತಿ ಪಡೆದು ದಾಳಿ ನಡೆಸಲಾಗಿದೆ. ಈ ಕೇಂದ್ರವು ವಂಚನಾ ಸ್ಕೀಮ್‌ಗಳ ಮೂಲಕ ಪಾಕಿಸ್ತಾನಿ ನಾಗರಿಕರನ್ನೇ ಮೋಸಗೊಳಿಸುತ್ತಿದ್ದವು ಎಂದು ವರದಿ ಹೇಳಿದೆ.

ಲೂಟಿಗೈದ ಉಪಕರಣಗಳ ವಶಪಡಿಸಿಕೊಳ್ಳುವ ಕ್ರಮ
ದಾಳಿಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಸ್ಥಳೀಯರಿಗೆ ಪ್ರವೇಶಕ್ಕೆ ಅವಕಾಶ ನೀಡಿದ್ದರಿಂದ, ಬೆಲೆ ಬಾಳುವ ಉಪಕರಣಗಳು ಲೂಟಿಗೀಡಾಗಿವೆ. ಈಗ, ಆ ಉಪ್ಪಕರಣಗಳನ್ನು ದಾಖಲೆಗಾಗಿ ವಶಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗೆ FIA ಕಚೇರಿಗೆ ರವಾನಿಸಲಾಗಿದೆ. ವಿದೇಶಿಯರು ಈ ವಂಚನಾ ಜಾಲದಲ್ಲಿ ಭಾಗಿಯಾಗಿರುವ ಕುರಿತು ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

Leave a Reply

Your email address will not be published. Required fields are marked *

Related News

error: Content is protected !!