ಕುಂದಗೋಳ: ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಅವಾಂತರದಿಂದ ಜನಜೀವನ ಅಸ್ತವ್ಯಸ್ತಗೂಂಡಿದೆ. ಇನ್ನೂ ರೈತರ ಹೊಲಗದ್ದೆಗಳಲ್ಲಿ ನೀರು ನಿಂತು ಜಲವೃಂತಗೊಂಡಿವೆ. ಹಳ್ಳ ಕೊಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿರುವ ಹಿನ್ನೆಲೆ ರಸ್ತೆಯ ಡಾಂಬರು ಮೇಲು ಪದರು ಕಿತ್ತು ರಸ್ತೆ ಸಂಚಾರ ಸ್ಥಗಿತಗೂಂಡಿದೆ.
ಹೌದು..! ಇಲ್ಲೊಂದು ಹಳ್ಳ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು. ಈ ಭಾಗದ ಜನರಿಗೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕುಂದಗೋಳ ತಾಲೂಕಿನ ಚಿಕ್ಕನರ್ತಿ ಹಾಗೂ ಹೀರೆನರ್ತಿ ಮಧ್ಯದಲ್ಲಿ ಹಾದುಹೋಗುವ ಗೊಗಿ ಹಳ್ಳ ವಿಪರೀತ ಮಳೆಯಿಂದಾಗಿ ಡಾಂಬರು ಕೊಚ್ಚಿ ಹೋದ ಪರಿಣಾಮ ರಸ್ತೆ ಸಂಚಾರ ಹರೋಹರ.
ಯರಗುಪ್ಪಿ ಮಾರ್ಗವಾಗಿ ಕುಂದಗೋಳ ಪಟ್ಟಣಕ್ಕೆ ದಿನನಿತ್ಯ ಕೊಲಿ ಕಾರ್ಮಿಕರು, ರೈತರು ಶಾಲಾ- ಕಾಲೇಜಿನ ವಿದ್ಯಾರ್ಥಿಗಳು, ಹೀಗೆ ಈ ರಸ್ತೆಯ ಮಧ್ಯ ಸಂಚಾರಿಸುತ್ತಾರೆ. ಪರ್ಯಾಯ ರಸ್ತೆ ಇಲ್ಲದೇ ಸಾರಿಗೆ ಇಲಾಖೆ ಬಸ್ಸುಗಳು ಬೆನಕನಹಳ್ಳಿ ಹಾಗೂ ಚಿಕ್ಕನರ್ತಿ ಗ್ರಾಮದಲ್ಲಿ ನಿಂತು ಪ್ರಯಾಣಕರು ಕರೆದುಹೋಯತ್ತಾರೆ. ಇಲ್ಲಿ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಆನಂತರ ಇಲ್ಲಿಗೆ ಯಾವುದೇ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಬೇಟಿ ನೀಡಿಲ್ಲ. ಇಲ್ಲಿ ಪ್ರತಿನಿತ್ಯ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಓಡಾಡಲು ಸಮಸ್ಯೆಯಾಗಿದ್ದು. ಕೂಡಲೇ ಈ ಸೇತುವೆ ಅಗಲೀಕರಣ ಆಗಬೇಕುನ್ನವುದೇ ಇಲ್ಲಿ ಜನ ಒತ್ತಾಯಸಿದ್ದಾರೆ.
ಕಳೆದ ಮೂರು ತಿಂಗಳು ಹಿಂದೆ ಮಳೆ ಸುರಿದಿ ಪರಿಣಾಮ ಡಾಂಬರು ಕಿತ್ತು ಹೋಗಿತ್ತು. ಲೋಕೋಪಯೋಗಿ ಇಲಾಖೆ ಅಲೊಂದಿಷ್ಟು ಇಲ್ಲಿದೊಂದಿಷ್ಟು ಮಣ್ಣು ಹಾಕಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು, ಆದರೆ ಇದಕ್ಕೆ ಶಾಶ್ವತ ಪರಿಹಾರ ಇಲ್ಲಿದೆ ಇರುವುದು ಸಾರ್ವಜನಿಕ ವಲಯದಲ್ಲಿ ನಿರಾಶೆ ಊಂಟಾಗಿದೆ.
ಕೊಡಲೇ ಲೋಕೋಪಯೋಗಿ ಇಲಾಖೆ ಸುಗಮ ಸಂಚಾರಕ್ಕೆ ರಸ್ತೆ ಕಲ್ಪಿಸಿ ಕೊಡಬೇಕೆಂದು ಇಲ್ಲಿನ ಸಾರ್ವಜನಿಕರ ಅಗ್ರಹವಾಗಿದೆ.
ವರದಿ; ಶಾನು ಯಲಿಗಾರ