ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜಿಂಕ್ಷನ್ ನಿವಾಸಿ ಆದಂತಹ ಯಶ್ವಂತ್ ರಾಷ್ಟ್ರೀಯ ಪದವಿ ಪೂರ್ವ ಕಾಲೇಜ್ ಬಿ ಆರ್ ಪಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾನೆ. ಮನೆಯಿಂದ ಕಾಲೇಜಿಗೆ ಹೊರಟವನು ಮಾರ್ಗ ಮಧ್ಯದಲ್ಲಿ ಸ್ನೇಹಿತನ ಬಳಿ ನಾನು ಕಾಲೇಜಿಗೆ ಬರುವುದಿಲ್ಲ ಡ್ಯಾಮ್ ನೋಡಿ ಬರಲು ಹೋಗುತ್ತೇನೆ ಎಂದು ಹೇಳಿ ಹೋದವನು ತಿರುಗಿ ಬಂದಿರುವುದಿಲ್ಲ. ಹುಡುಗನ ಪೋಷಕರು ಸದ್ಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಹಾಗೂ ಆತನ ಕುಟುಂಬಸ್ಥರು ಯಶವಂತನನ್ನು ಹುಡುಕುವ ಕೆಲಸಕ್ಕೆ ಮುಂದಾಗಿದ್ದಾರೆ.
ಹಾಗೂ ಈ ವರದಿಯನ್ನು ಓದಿದ ಯಾರಾದರೂ ಈ ಹುಡುಗನನ್ನು ಕಂಡಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕಾಗಿ ವಿನಂತಿಸುತ್ತಿದ್ದೇವೆ.