ಮುಂಡಗೋಡ: ತಾಲೂಕಿನ ಲೋಯೋಲಾ ಕೇಂದ್ರೀಯ ವಿದ್ಯಾಲಯದಲ್ಲಿ ಇಂದು ಶಿಕ್ಷಕರ ದಿನಾಚರಣೆ ಮತ್ತು ಗುರು ಗೌರವಾರ್ಪಣಾ ಸಮಾರಂಭ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತಹಸಿಲ್ದಾರ್ ಶಂಕರ ಗೌಡಿ ನೆರವೇರಿಸಿದರು.ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ.ಎಸ್ ಪಟಗಾರ ವಹಿಸಿದ್ದರು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಮತ್ತು ತಾಲೂಕು ಸಮಿತಿಯಿಂದ ಜಿಲ್ಲಾ ಹಂತಕ್ಕೆ ಗುರುತಿಸಲ್ಪಟ್ಟ ಉತ್ತಮ ಶಿಕ್ಷಕರನ್ನು ಸಹ ಸನ್ಮಾನಿಸಲಾಯಿತು ಜೊತೆಗೆ ರಾಜ್ಯ ಪ್ರತಿಭಾ ಪುರಸ್ಕಾರ ವೇದಿಕೆಯಿಂದ ಶಿಕ್ಷಣ ಸಾರಥಿ ಪ್ರಶಸ್ತಿ ಪಡೆದ ಗುಂಜಾವತಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಕಾಂತೇಶ್ ಎಸ್ ಕುಮ್ಮಣ್ಣನವರ ಅವರನ್ನು ಸನ್ಮಾನಿಸಲಾಯಿತು ಮತ್ತು 2020-21ನೇ ಸಾಲಿನ ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ,ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ವಿ ಎಸ್ ಪಾಟೀಲ್, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಲ್ ಟಿ ಪಾಟೀಲ್, ಲೊಯೊಲಾ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಫಾದರ್ ಮೆಲ್ವಿನ್ ಲೋಬೋ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ದಯಾನಂದ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರದೀಪ ಕುಲಕರ್ಣಿ,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮೇಶ ಅಂಬಿಗೇರ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಭಾರಿ ಸಮನ್ವಯ ಅಧಿಕಾರಿಯಾದ ಜಿ.ಎನ್ .ನಾಯ್ಕ ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶಿವಮೂರ್ತಿ ಎಚ್,ಮತ್ತು ಶಿಕ್ಷಣ ಸಂಯೋಜಕರು,ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳು,ಹಾಗೂ ತಾಲೂಕಿನ ಎಲ್ಲ ಶಿಕ್ಷಕರು ವೃಂದದವರು, ಮುಂತಾದವರು ಉಪಸ್ಥಿತರಿದ್ದರು.ಶಿಕ್ಷಕರಾದ ಬಸವರಾಜ್ ಬೆಂಡ್ಲಗಟ್ಟಿ, ಕುದ್ಸಿಯಾ ಭಾನು ಸವಣೂರು ನಿರೂಪಿಸಿದರು, ಜಿ. ಎನ್. ನಾಯ್ಕ ಸ್ವಾಗತಿಸಿದರು, ಕೆ ಕೆ ಕರುವಿನಕೂಪ್ಪ ವಂದಿಸಿದರು.
ವರದಿ :ಮಂಜುನಾಥ ಹರಿಜನ