ನಂಜನಗೂಡು ತಾಲೂಕಿನ ಆದಿವಾಸಿ ಕಾಲೋನಿ ಮತ್ತು ಗ್ರಾಮೀಣ ಪ್ರದೇಶದ ಕಿರಾಣಿ ಮತ್ತು ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಗ್ಗಿಲ್ಲದೆ ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿದ್ದ ಹಿನ್ನೆಲೆ ಮಾಹಿತಿ ಅರಿತ ಮೈಸೂರು ಗ್ರಾಮಾಂತರ ಉಪ ಆಯುಕ್ತೆ ಡಾ.ಮಹದೇವಿ ಬಾಯಿ ನಂಜನಗೂಡಿನ ಅಬಕಾರಿ ಇಲಾಖೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಧ್ಯದ ಅಂಗಡಿಯ ಮಾಲೀಕರು ಮತ್ತು ಅನಧಿಕೃತವಾಗಿ ಮಧ್ಯ ಮಾರಾಟ ಮಾಡುವವರಿಗೆ ಎಚ್ಚರಿಕೆಯ ಸಂದೇಶವನ್ನು ತಿಳಿಸಿದ್ದಾರೆ.

ತಾಲ್ಲೂಕಿನ ಬಾರ್ ಸನ್ನದುದಾರರ ಜೊತೆ ಸಭೆ.
ಆದಿವಾಸಿಗಳು ವಾಸಿಸುವ ಕಾಲೋನಿಗಳಲ್ಲಿ ಮತ್ತು ಹಳ್ಳಿಗಳಲ್ಲಿರುವ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಹಾಗೂ ನಾಗಣಾಪುರ ಕಾಲೋನಿಯಲ್ಲಿ ಮದ್ಯೆ ಸೇವಿಸಿ ವ್ಯಕ್ತಿ ಸಾವನ್ನಪಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸನ್ನದುದಾರರ ಜೊತೆ ಸಭೆ ನಡೆಸಿ ಅವರಿಗೆ ನಿರ್ದೇಶನ ನೀಡಲಾಗಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಬಾರ್ ಗಳಿಂದ ಹಳ್ಳಿಗಳಲ್ಲಿರುವ ಕಿರಾಣಿ ಅಂಗಡಿಗಳು ಮತ್ತು ಪೆಟ್ಟಿ ಅಂಗಡಿಗಳಿಗೆ ಮದ್ಯವನ್ನು ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈಗಾಗಲೇ ಸಾಕಷ್ಟು ಪ್ರಕರಣಗಳನ್ನು ಕೂಡ ದಾಖಲು ಮಾಡಿಕೊಳ್ಳಲಾಗಿದೆ ಒಂದು ವೇಳೆ ಬಾರ್ ಗಳಿಂದ ಸರಬರಾಜು ಮಾಡುವುದು ಕಂಡು ಬಂದರೆ ಮುಲಾಜಿಲ್ಲದೆ ಬಾರ್ ಮಾಲೀಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ನಂಜನಗೂಡು ತಾಲ್ಲೂಕಿನಲ್ಲಿ ವಿಶೇಷವಾಗಿ ಐದು ತಂಡಗಳನ್ನು ರಚನೆ ಮಾಡಲಾಗಿದೆ. 5 ತಂಡಗಳಿಗೂ ನಿರ್ದೇಶನ ನೀಡಲಾಗಿದ್ದು, ಅಕ್ರಮ ಮದ್ಯ ಮಾರಾಟ ಕಂಡು ಬಂದರೆ ಅಬಕಾರಿ ಇಲಾಖೆಯ ದೂರವಾಣಿ 9449597184 ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ ತಿಳಿಸಬಹುದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಬಕಾರಿ ಉಪ ಅಧೀಕ್ಷಕರಾದ ನಟರಾಜ್, ನಂಜನಗೂಡು ವಲಯ ಅಬಕಾರಿ ನಿರೀಕ್ಷಕ ನಾಗೇಂದ್ರ, ಅಬಕಾರಿ ಉಪ ನಿರೀಕ್ಷಕ ಅಬ್ಜಲ್, ಸಿಬ್ಬಂದಿಗಳಾದ ಚಂದ್ರು, ಅಭಿ, ಮಧುಕೇಶ್, ಶಿಲ್ಪಾ ಸೇರಿದಂತೆ ಹಲವರು ಭಾಗವಹಿಸಿದ್ದರು.

***

1. ಡಾ.ಮಹದೇವಿ ಬಾಯಿ
ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತರು.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಅಕ್ರಮ ಮಧ್ಯ ಮಾರಾಟ ವಿಚಾರವಾಗಿ ಈಗಾಗಲೇ ಮಧ್ಯದ ಅಂಗಡಿ ಮಾಲೀಕರ ಜೊತೆ ಕುಲಂಕುಷವಾಗಿ ಮತ್ತು ಸುದೀರ್ಘವಾಗಿ ಸಭೆ ನಡೆಸಿ ಎಚ್ಚರಿಸಲಾಗಿದೆ. ಆದಿವಾಸಿ ಕಾಲೋನಿಗಳಲ್ಲಿ ಅಕ್ರಮ ಮಧ್ಯದ ಮಾರಾಟ ಕಂಡು ಬಂದಲ್ಲಿ ಅಂಥವರ ವಿರುದ್ಧ ನಿರ್ಧ್ಯಕ್ಷೀಣವಾಗಿ ಕ್ರಮ ಕೈಗೊಳ್ಳುತ್ತೇವೆ ಈಗಾಗಲೇ ಮೂರು ತಂಡಗಳನ್ನು ರಚನೆ ಮಾಡಲಾಗಿದೆ ರಾತ್ರಿ ಹಗಲು ನಿರಂತರವಾಗಿ ಆ ತಂಡಗಳು ಕಾರ್ಯಾಚರಣೆಯಲ್ಲಿ ನಿರತರಾಗಿರುತ್ತಾರೆ. ಅಕ್ರಮ ಮಧ್ಯ ಮಾರಾಟ ಮತ್ತು ಅನಧಿಕೃತವಾಗಿ ಮಧ್ಯ ಮಾರಾಟ ಮಾಡಿರುವ ಅಂಗಡಿ ಮಾಲೀಕರ ವಿರುದ್ಧವೂ ಕೂಡ ನಾವು ಕ್ರಮಕ್ಕೆ ಮುಂದಾಗುತ್ತೇವೆ ಈಗಾಗಲೇ ನಾಗಣಪುರ ಹಾದಿವಾಸಿ ಕಾಲೋನಿಗೆ ಭೇಟಿ ನೀಡಿ ಕುಲಂಕುಶವಾಗಿ ಸವಿವರವಾದ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಮಧ್ಯ ಮಾರಾಟ ಮತ್ತು ಟೆಟ್ರಾ ಪ್ಯಾಕ್ ಗಳು ಸಿಕ್ಕಿದರೂ ಕೂಡ ಅಂಥವರನ್ನು ಜೈಲಿಗೆ ಕಳಿಸಲು ನಾವು ತಯಾರಾಗಿದ್ದೇವೆ ಅಕ್ರಮಗಳ ಬಗ್ಗೆ ಮುಲಾಜಿಲ್ಲದ ಕ್ರಮ ಕೈಗೊಳ್ಳಲು ಅಬಕಾರಿ ಇಲಾಖೆ ಸಿದ್ದವಾಗಿದೆ ಎಂದು ಸಂದರ್ಭದಲ್ಲಿ ಡಿಸಿ ಮಾಹಿತಿ ನೀಡಿದರು. ವರದಿ: ಮೋಹನ್

Related News

error: Content is protected !!