ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲ್ಲೂಕಿನ ಕೋಲೂರ ಗ್ರಾಮ ಪಂಚಾಯತಿ ಪಿಡಿಒ ಮಾಲಾಶ್ರೀ ಬಿ ಕೆಂಚನಗೌಡರ ಮತ್ತು ಕಾರ್ಯದರ್ಶಿ ಹಣಮಂತ ಎಸ್ ಗಾಣಿಗೇರ ಇವರು ಇಬ್ಬರೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಹಾಗೂ ಸರಿಯಾದ ಸಮಯಕ್ಕೆ ಕಛೇರಿಗೆ ಬರುತ್ತಿಲ್ಲವೆಂದು ಇಲ್ಲಿಯ ಸ್ಥಳೀಯ ಯುವಕರು ನಮ್ಮ ಪತ್ರಿಕೆಗೆ ತಿಳಿಸಿದ್ದಾರೆ.
ದಿನನಿತ್ಯವೂ ಗ್ರಾಮದ ಜನರು ಒಂದಲ್ಲ ಒಂದು ಕೆಲಸಕ್ಕೆ ಪಂಚಾಯತಿಗೆ ಹೋಗಲೆಬೇಕಾಗುತ್ತದೆ ಆದರೆ ಇಲ್ಲಿ ಅಧಿಕಾರಿಗಳೆ ಇಲ್ಲದಿದ್ದರೆ ಗ್ರಾಮಸ್ಥರ ಗೋಳನ್ನು ಕೇಳುವವರು ಯಾರೂ?
ದಿನವಿಡೀ ಕಾದು ಕುಳಿತರು ಸಹ ಪಿಡಿಒ ಹಾಗೂ ಕಾರ್ಯದರ್ಶಿ ಗ್ರಾಮ ಪಂಚಾಯತಿಗೆ ಬರುವುದಿಲ್ಲ.
ಪಿಡಿಒ ಮಾಲಾಶ್ರೀ ಹಾಗೂ ಕಾರ್ಯದರ್ಶಿ ಹಣಮಂತ ಸರಿಯಾದ ಸಮಯಕ್ಕೆ ಹಾಜರಾಗುತ್ತಿಲ್ಲ. ತಮ್ಮ ಮನಸ್ಸಿಗೆ ಬಂದಾಗ ಬರುತ್ತಾರೆ ಸಾಕಾದರೆ ಹೋಗುತ್ತಾರೆ. ಇವರು ಇಬ್ಬರೂ ಮಧ್ಯಾಹ್ನ ಗಂಟೆ 12 ಆದರೂ ಕಛೇರಿಗೆ ಬರುವುದೇ ಇಲ್ಲವೆಂದು ತಿಳಿಸಿದರು.
ಪ್ರತಿನಿತ್ಯವೂ ಇದೆ ಗೋಳು ಅನುಭವಿಸಿ ಸ್ಥಳೀಯ ಯುವಕರೊಬ್ಬರು ಕಾರ್ಯದರ್ಶಿ ಹಣಮಂತನಿಗೆ ಕರೆ ಮಾಡಿ “ಸರ್ ನೀವು ಪಂಚಾಯತಿಗೆ ಎಷ್ಟು ಗಂಟೆಗೆ ಬರುತ್ತಿರಿ” ಎಂದು ಕೇಳಿದಾಗ ಆ ಯುವಕನಿಗೆ ಅದನ್ನು ಕೇಳೋಕೆ “ನೀ ಯಾರು ಲೇ” ಎಂಬ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.
ಒಬ್ಬ ಪ್ರಜೆಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎಂದರೆ ಈ ಕಾರ್ಯದರ್ಶಿಗೆ ಎಷ್ಟು ಸೊಕ್ಕಿರಬೇಡ? ನೀವೇ ಯೋಚಿಸಿ.
ಈ ವಿಚಾರವಾಗಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಕರೆ ಮೂಲಕ ತಿಳಿಸಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ವರದಿಯನ್ನು ಗಮನಿಸಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ವರದಿ: ವಿಶ್ವನಾಥ ಭಜಂತ್ರಿ