ದಿಲ್ಲಿಯ ಕೈಲಾಶ್ ನಗರದಲ್ಲಿ ಜನರನ್ನು ಶಾಕ್ ಮಾಡುವಂತ ಘಟನೆ ನಡೆದಿದೆ. ನಾಯಿಗಳ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಾಗೂ ಪ್ರಾಣಿ ಪ್ರೇಮಿಗಳು ಹಿಡಿದು ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಸಂಬಂಧಿತ ವೀಡಿಯೋಗಳು ವೈರಲ್ ಆಗಿ ಹರಿದಾಡುತ್ತಿವೆ.

ವೈರಲ್ ಆಗಿರುವ ವೀಡಿಯೋದಲ್ಲಿ, ಆರೋಪಿತ ವ್ಯಕ್ತಿಯು ನಾಯಿಯ ಮೇಲಿನ ಲೈಂಗಿಕ ಹಲ್ಲೆ ಎಸಗುವ ದೃಶ್ಯಗಳು ಸೆರೆಯಾಗಿದ್ದು, ಹಿಂದಿನಿಂದ ಒಂದು ಗಂಠೆ ಧ್ವನಿಯಲ್ಲಿ “ತೇರಾ ಭಾಯ್ ಟಾರ್ಚ್ ದಿಖಾ ರಹಾ ಹೈ” ಎಂಬ ಮಾತು ಕೇಳಿಸಿಕೊಳ್ಳುತ್ತದೆ. ಮತ್ತೊಂದು ವೀಡಿಯೋದಲ್ಲಿ ಜನರು ಆ ವ್ಯಕ್ತಿಯನ್ನು ಥಳಿಸುತ್ತಿರುವುದೂ ಹಾಗೂ “ನೀನು ಎಷ್ಟು ನಾಯಿಗಳ ಮೇಲೆ ಅತ್ಯಾಚಾರ ಮಾಡಿದ್ದೀಯಾ?” ಎಂಬ ಪ್ರಶ್ನೆ ಕೇಳುತ್ತಿರುವುದೂ ದೃಶ್ಯವಿದೆ.

ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುತ್ತಿರುವ ಸಂದರ್ಭದಲ್ಲಿ, ವ್ಯಕ್ತಿಯು “ಕಿಟ್ನೋ ಕೆ ಸಾಥ್ ಕಿಯಾ ಬಾಟಾ?” ಎಂಬ ಪ್ರಶ್ನೆಗೆ “13 ನಾಯಿಗಳ ಮೇಲೆ” ಎಂದು ತಾನೇ ಉತ್ತರ ನೀಡಿರುವುದನ್ನು ವೀಕ್ಷಿಸಬಹುದು. ಜನರ ಕೋಪ ತೀವ್ರಗೊಂಡಿದ್ದು, ಆತನ ಬಟ್ಟೆಗಳನ್ನು ಹರಿದು ಹಾಕಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯು ಖಿನ್ನಮನಸ್ಸಿನಲ್ಲಿ ಕುಳಿತಿರುವ ದೃಶ್ಯವಿದೆ.

ಆ ಆರೋಪಿತನನ್ನು ರೇಣು ಎಂದು ಗುರುತಿಸಲಾಗಿದ್ದು, ಇದೀಗ ಆತನ ವಿರುದ್ಧ ಸೂಕ್ತ ವಿಧ್ಯಾಯ್ದ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಣಿಗಳ ಮೇಲಿನ ಹಿಂಸೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವ ಅಗತ್ಯತೆಯ ಬಗ್ಗೆ ಮತ್ತೊಮ್ಮೆ ಸಾರ್ವಜನಿಕ ಚರ್ಚೆ ಪ್ರಾರಂಭವಾಗಿದೆ.

Related News

error: Content is protected !!