ಕಲಬುರಗಿ: ನಗರದ ಸಬ್ ಅರ್ಬನ್ ಪೊಲೀಸ ಠಾಣೆಯ ವ್ಯಾಪ್ತಿಯ ಕೇರಿ ಭೋಸಗಾ ಹತ್ತಿರ ಜಾನುವಾರುಗಳನ್ನು ದರೋಡೆ ಮಾಡಲು ಪ್ರಯತ್ನಿಸುತ್ತಿದ್ದ 07 ಜನ ದರೋಡೆಕೊರರನ್ನು ಬಂಧಿಸಲಾಗಿದ್ದು, ಬಂಧಿತರಿಂದ ದರೋಡೆಗೆ ಬಳಸುತ್ತಿದ್ದ ಸ್ಕಾರ್ಪೀಯೋ ವಾಹನ, ನಗದು ಹಣ, ಹಗ್ಗ, ಬಡಿಗೆ,ರಾಡ ಸೇರಿದಂತೆ ಒಟ್ಟು ₹ 2,28,005 /- ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಕ್ಕಾಗಿ ಮಾನ್ಯ ಪೊಲೀಸ ಆಯುಕ್ತರಾದ ಡಾ॥ ವೈ.ಎಸ್.ರವಿಕುಮಾರ, ಭಾ.ಪೊ.ಸೇ.ರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.