ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತುಂಬರ್ಗಿ ಗ್ರಾಮದಲ್ಲಿ ತಮ್ಮ ಹೊಲಗಳಿಗೆ ತೆರಳಲು 25ಕ್ಕೂ ಹೆಚ್ಚು ರೈತರು ಸೇರಿಕೊಂಡು ಜೆಸಿಬಿ ಯಂತ್ರದ ಮೂಲಕ ರಸ್ತೆ ನಿರ್ಮಿಸಿಕೊಂಡಿದ್ದಾರೆ.
ಸಿರಸಿ ಹುಬ್ಬಳ್ಳಿ ರಸ್ತೆಯಲ್ಲಿ ಬರುವ ಜೋಗೇಶ್ವರ ಹಳ್ಳವು ತುಂಬರ್ಗಿ ಮತ್ತು ಲಕ್ಕೊಳ್ಳಿ ಗ್ರಾಮಗಳ ಮಧ್ಯೆ ಹಾಯ್ದು ಹೋಗುತ್ತದೆ.ಚಿಗಳ್ಳಿ ಮತ್ತು ಸಾಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ರೈತರ ಹೊಲಗಳು ಲಕ್ಕೊಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಇರುವುದರಿಂದ ಈ ಹಳ್ಳವನ್ನು ದಾಟಿ ಹೊಲಗಳಿಗೆ ತೆರಳಬೇಕಾಗುತ್ತದೆ ಮತ್ತು ಬೆಳೆಗಳನ್ನು ಮನೆಗೆ ಸಾಗಿಸಬೇಕಾಗುತ್ತದೆ.ಈ ಹಳ್ಳವು ಹೆಚ್ಚು ಮಳೆಯಾಗಿದ್ದರಿಂದ ರೈತರು ಹೊಲಗಳಿಗೆ ಓಡಾಡಲು ಸಾಧ್ಯವಾಗುತ್ತಿರಲಿಲ್ಲ ಹಾಗಾಗಿ 25ಕ್ಕೂ ಹೆಚ್ಚು ರೈತರು ಸೇರಿಕೊಂಡು ರಸ್ತೆ ನಿರ್ಮಿಸಿಕೊಂಡಿದ್ದಾರೆ.
ಸೇತುವೆ ನಿರ್ಮಿಸಲು 1 ಕೋಟಿ ರೂಪಾಯಿ ಬಿಡುಗಡೆ:
ಈಗಾಗಲೇ ತುಂಬರಿ ಮತ್ತು ಲಕ್ಕೊಳ್ಳಿ ಗ್ರಾಮಗಳ ಮಧ್ಯೆ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕಾಗಿ 1 ಕೋಟಿ ರೂಪಾಯಿಯನ್ನು ಸಚಿವರಾದ ಶಿವರಾಮ್ ಹೆಬ್ಬಾರ್ ಅವರು ಬಿಡುಗಡೆ ಮಾಡಿದ್ದಾರೆ ಎಂದು ರೈತರೇ ತಿಳಿಸಿದರು.ಈ ಕಾಮಗಾರಿ ಪ್ರಾರಂಭವಾಗಿ ಮುಗಿಯಲು ಇನ್ನೂ ನಾಲ್ಕೈದು ತಿಂಗಳು ಆಗಬಹುದು ಹಾಗಾಗಿ ಸದ್ಯ ಬೆಳೆದಿರುವ ಬೆಳೆಗಳನ್ನು ಮನೆಗೆ ಸಾಗಿಸಲು ಲಕ್ಕೊಳ್ಳಿ ಇಂದ ಲಕ್ಕೊಳ್ಳಿ ಕ್ರಾಸ್ ನ ಮೂಲಕ ಶಿರಸಿ ಹುಬ್ಬಳ್ಳಿ ರಸ್ತೆ ಮಾರ್ಗವಾಗಿ ಇಲ್ಲವೇ ಲಕ್ಕೊಳ್ಳಿ ಸಿರಿಗೇರಿ ಮಾರ್ಗವಾಗಿ ಸಾಗಿಸಬೇಕು ಈ ಮಾರ್ಗ ಬಹಳ ದೂರವಾಗುವುದರಿಂದ ತಾತ್ಕಾಲಿಕವಾಗಿ ರಸ್ತೆಯನ್ನು ನಿರ್ಮಿಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ರೈತರು.
ರಸ್ತೆ ಕಡಿಕರಣಗೊಳ್ಳಬೇಕಿದೆ: ಹೌದು ಸೇತುವೆಯಿಂದ ಎರಡು ಕಡೆ 1800 ಮೀ ರಸ್ತೆ ಇದ್ದು ಇದು ಮಳೆಗಾಲದಲ್ಲಿ ಕೆಸರುಮಯವಾಗುತ್ತದೆ ಹೀಗಾಗಿ ರೈತರಿಗೆ ಹೊಲಗಳಿಗೆ ತೆರಳಲು ಕಷ್ಟವಾಗುತ್ತದೆ ಹಾಗಾಗಿ ಮಾನ್ಯ ಸಚಿವರು ಈ ರಸ್ತೆಯನ್ನು ಮೋಹರಂ ಹಾಕಿ ಕಡೀಕರಣ ಮಾಡಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು.
ಈ ಸಂದರ್ಭದಲ್ಲಿ ಬಾಬುರಾಯ ಲಾಡನವರ ಸೇರಿದಂತೆ ಹಲವಾರು ರೈತರು ಇದ್ದರು.
ವರದಿ :ಮಂಜುನಾಥ ಹರಿಜನ