ಮುಂಡಗೋಡ : ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಇಂದು ಪಟ್ಟಣ ಟೌನ್ ಹಾಲ್ ನಲ್ಲಿ ಪಟ್ಟಣದ ಕೊಳಗೇರಿ ನಿವಾಸಿಗಳಿಗೆ ” ಅಧಿಕೃತ ಹಕ್ಕು ಪತ್ರ ವಿತರಣಾ ” ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿದರು.

30 ವರ್ಷಗಳ ನಂತರ ಮೊಟ್ಟಮೊದಲ ಬಾರಿಗೆ ಪಟ್ಟಣದ ಗಾಂಧಿ ನಗರ, ಕಂಬಾರಗಟ್ಟಿ, ಲಮಾಣಿ ತಾಂಡ, ಅಂಬೇಡ್ಕರ್ ಬಡಾವಣೆ 250 ಜನ ಅರ್ಹ ಫಲಾನುಭವಿಗಳಿಗೆ ಸಚಿವರು ಅಧಿಕೃತ ಹಕ್ಕು ಪತ್ರವನ್ನು ವಿತರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇನ್ನುಳಿದ ಹಲವಾರು ಜನರಿಗೆ ಎರಡು ತಿಂಗಳಲ್ಲಿ ಹಕ್ಕು ಪತ್ರ ವಿತರಿಸಲಾಗುವುದು ಎಂದು ಹೇಳಿದ ಅವರು ಇಂತಹ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಹೇಳಿದರು.ಇಷ್ಟು ದಿನಗಳ ಕಾಲ ಮನೆಗಳನ್ನು ಮಾತ್ರ ನೀಡುತ್ತಿದ್ದೆವು ಇಂದು ನಿಮಗೆ ಹಕ್ಕು ಪತ್ರಗಳನ್ನು ನೀಡುತ್ತಿದ್ದೇವೆ ಎಂದರು‌.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್, ಪ.ಪಂ ಅಧ್ಯಕ್ಷರಾದ ಜಯಸುಧಾ ಬೋವಿ, ಉಪಾಧ್ಯಕ್ಷರಾದ ಶ್ರೀಕಾಂತ ಸಾನು, ಪ್ರಮುಖರಾದ ಉಮೇಶ್ ಬಿಜಾಪುರ, ಗುಡ್ಡಪ್ಪ ಕಾತೂರ ಹಾಗೂ ಪಟ್ಟಣ ಪಂಚಾಯತ ಸದಸ್ಯರು, ಸ್ಥಳೀಯ ಮುಖಂಡರು, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಹರಿಜನ.

error: Content is protected !!