ಕುಂದಗೋಳ: ತಾಲೂಕಿನ ಯರಗುಪ್ಪಿಯಿಂದ ಮುಳ್ಳಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಮೂರನಾಲ್ಕು ತಿಂಗಳಿಂದ ಸತತವಾಗಿ ಮಳೆ ಸುರಿದ ಪರಿಣಾಮ ರಸ್ತೆಗಳು ನೆಲಕಚ್ಚಿ ಸಂಚಾರ ಆದೋಗತಿಗೆ ತಂದೊಡ್ಡುದೆ. ಅಧಿಕಾರಿಗಳು ಮಾತ್ರ ಮೌನ? ಇತ್ತ ಕಡೆ ಗಮನ ಕೂಡದೇ ಈ ಭಾಗದ ಸಾರ್ವಜನಿಕರು ಅಳಲು ಕೇಳುವವರು ಯಾರು? ಎಂಬತಾಗಿದೆ.

ಮುಳ್ಳಹಳ್ಳಿ ಗ್ರಾಮದ ಜನರು ನಿತ್ಯ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ, ಆಸ್ಪತ್ರೆಗೆ, ಸಂತೆ, ಎಲ್ಲದಕ್ಕೂ ಹರಸಿ ಯರಗುಪ್ಪಿ ಗ್ರಾಮಕ್ಕೆ ಬರಲೇಬೇಕು. ಇನ್ನೂ ವಯೋವೃದ್ಧರು, ರೈತರು ಶಾಲಾ-ಕಾಲೇಜನ ವಿದ್ಯಾರ್ಥಿಗಳು ಸಾರ್ವಜನಿಕರು ಬೆನಕನಹಳ್ಳಿ, ಯರೇನಾರಾಯಣಪೂರ, ಸುತ್ತುವರೆದೂ ಇಲ್ಲಿನ ಸಂಚಾರಸಬೇಕಾದ ಪರಿಸ್ಥಿತಿ ಎದುರಾಗಿದೆ.

ಇನ್ನೂ ಇದೇ ರಸ್ತೆ 2013-14 ನೇ ಸಾಲಿನಲ್ಲಿ 68,30,220 ಅರವತ್ತು ಎಂಟು ಲಕ್ಷ ಮೂವತ್ತು ಸಾವಿರದ ಎರಡನೂರ ಇಪ್ಪತ್ತು ರೂಪಾಯಿ ಖರ್ಚು ಮಾಡಿ ಡಾಂಬರೀಕರಣ ಕಾಮಗಾರಿ ಮಾಡಿದ್ದಾರೆ.
ನಂತರ 2020-21 ಸಾಲಿನಲ್ಲಿ 17,2100 ಹದಿನೇಳು ಲಕ್ಷದ ಇಪತ್ತೊಂದು ಸಾವಿರ ರೂಪಾಯಿ ಇದು ಪ್ರವಾಹದಿಂದ ಹಾನಿಗೊಳಗಾದ ರಸ್ತೆ ಪುನಃ ನಿರ್ಮಿಸಿದ ಸಂದರ್ಭದಲ್ಲಿ ಕಾಮಗಾರಿ ಕೈಗೊಂಡ ಕಾರ್ಯ ಇಷ್ಟೇಲ್ಲಾ ಖರ್ಚು ಮಾಡಿ ರಸ್ತೆ ನಿರ್ಮಿಸಿದ್ದಾರೆ. ಹಾಗಾದರೆ ಕಳೆಪೆನಾ? ಇವರುಗಳು ಮಾಡೋ ದುರಂತಕ್ಕೆ ಸಾರ್ವಜನಿಕರು ಪರಿಪಾಟಲು ಪಡೆಬೇಕಾಗಿದೆ.

ಒಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಗಾಡಾ ನಿದ್ರೆಯಲ್ಲಿ ನಿದ್ರೆಸುತ್ತು ಇದೇ ಏನೂ? ಈ ಭಾಗದ ಸಾರ್ವಜನಿಕರು ಕಳೆದ ಮೂರು ತಿಂಗಳುದಿಂದ ಇದೇ ರಸ್ತೆಯಲ್ಲಿ ತಿರುಗಾಡುತ್ತಾ ಇದ್ದಾರೆ ಅಧಿಕಾರಿಗಳ ಮಾತ್ರ ನಮ್ಮ ಗಮನಕ್ಕೆ ಬಂದಿಲ್ಲ ಅನ್ನೂ ಹಾಗೇ ವರ್ತಿಸುವುದು ಎಷ್ಟರ ಮಟ್ಟಿಗೆ ಸರಿ? ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈಗಲಾದರೋ ಈ ರಸ್ತೆ ದುರಸ್ತಿ ಭಾಗ್ಯ ಒದಗಿಸುತ್ತಾರ ಇಲೋ ಕಾದುನೋಡಬೇಕು.

ವರದಿ:ಶಾನು ಯಲಿಗಾರ

error: Content is protected !!