ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅಮ್ಮೆನಳ್ಳಿ ಗ್ರಾಮದ ಬಳಿ ಬರುವ ಹಣಗರ ಹತ್ತಿರ ವ್ಯಕ್ತಿಯೊಬ್ಬನ ಬಳಿ ಇರುವ ಮೊಬೈಲ್ 11000 ರೂ ಹಣವನ್ನೂ ಸುಲಿಗೆ ಮಾಡಿದ ಘಟನೆ ಶಿರಸಿ ಅಮ್ಮೇನಳ್ಳಿ ಹನಗರ ಬಳಿ ನಡೆದಿದೆ .
ಶ್ರೀಪಾದ್ ದೇವರು ಹೆಗ್ಡೆ ಎಂಬ ವ್ಯಕ್ತಿ ಅಮ್ಮೆನಳ್ಳಿಯಲ್ಲಿ ಕಿರಾಣಿ ಅಂಗಡಿಯೊಂದನ್ನು ಇರಿಸಿಕೊಂಡಿದ್ದರು . ಅಂಗಡಿಯಿಂದ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುವಾಗ ಹಣಗಾರ ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕತ್ರನಾಕ ದೊರೋಡೆ ಕೊರರು ಮಹಮದ್ ಇಸಾಕ್ ಅಬ್ದುಲ್ಲಾ ಮಹಮದ್ ಶೇಕ್ ಹಾಗೂ ಮತ್ತಿಗರಿನ ಪ್ರವೀಣ ಮಾರುತಿ ಅಲಗೆರಿಕರ್ ಇವರು ಶ್ರೀಪಾದ್ ದೇವರು ಹೆಗ್ಡೆ ಯವರ ಬಳಿ ಇರುವ 11000 ರೂ ಗಳು ಮತ್ತು 3 ಮೊಬೈಲ್ ಗಳು. ಹಾಗೂ ಅಧಾರ್ ಕಾರ್ಡ್ ಜಮೀನಿನ ಮ್ಯೂಟೇಶನ್ ಗಳನ್ನು ದೌರ್ಜನ್ಯದಿಂದ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಕೂಡಲೇ ಭಯಬಿತರಾದ ಶ್ರೀಪಾದ್ ದೇವರು ಹೆಗ್ಡೆ ರವರು ತಕ್ಷಣ ಶಿರಸಿ ಗ್ರಾಮೀಣ ಠಾಣೆಗೆ ತೆರಳಿ ನಡೆದ ಘಟನೆಯ ಮಾಹಿತಿಯನ್ನು ತಿಳಿಸಿದರು.
ಕೂಡಲೇ ಘಟನೆ ನಡೆದ ಮಾಹಿತಿಯನ್ನು ಪಡೆದ ಶಿರಸಿ ಗ್ರಾಮೀಣ ಪೊಲೀಸರು ಕೂಡಲೇ ಕಾರ್ಯ ದಕ್ಷತೆಯಿಂದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿರುತ್ತಾರೆ . ಹಾಗೂ ಹಿರಿಯ ಅಧಿಕಾರಿಗಳಾದ ಡಿ ವೈ ಎಸ್ಪಿ ರವಿ ನಾಯ್ಕ ಮತ್ತು ಸಿಪಿಐ ರಾಮಚಂದ್ರ ನಾಯಕ ರವರು ಹಾಗೂ ಸಿಬ್ಬಂದಿ ವರ್ಗದವರು ಈ ಆರೋಪಿಯವರನ್ನು. ಬಂಧಿಸುವಲ್ಲಿ ಭಾಗಿಯಾಗಿ ಯಶಸ್ವಿಯಾಗಿದ್ದಾರೆ.
ವರದಿ: ಶ್ರೀಪಾದ್ ಹೆಗಡೆ.