ಖಾನಾಪುರ: ಸೆಪ್ಟೆಂಬರ್ 12ರಂದು ಹಸುಗಳಿಗೆ ಮೇವು ತರಲು ಮನೆಯವರಿಗೆ ತಿಳಿಸಿ ರಾಮಚಂದ್ರ ಎಂಬಾತ ಹೊಲಕ್ಕೆ ತೆರಳಿರುತ್ತಾನೆ. ಎಷ್ಟೊತ್ತಾದರೂ ಮನೆಗೆ ಮರಳದ ಕಾರಣ ಎಲ್ಲಾ ಕಡೆ ಹುಡುಕಿ ಮನೆಯವರು ಖಾನಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿರುತ್ತಾರೆ.
ಅಕ್ಟೋಬರ್ 6ನೇ ತಾರೀಕು ಕೃಷಿ ಕಾರ್ಮಿಕರು ಜಮೀನುಗಳಿಗೆ ಕೆಲಸ ಮಾಡಲು ಹೋಗಿದ್ದಂತಹ ಸಂದರ್ಭದಲ್ಲಿ ವ್ಯಕ್ತಿ ಸುಟ್ಟು ಕರಕಲಾಗಿ ಬಿದ್ದಿರುವಂತದು ಕಂಡುಬರುತ್ತದೆ ಇದನ್ನು ಕಂಡ ಕೃಷಿ ಕಾರ್ಮಿಕರು ಖಾನಾಪುರ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸುತ್ತಾರೆ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ, ಇದು ಹೊಲಕ್ಕೆ ಮೇವು ತರಲು ಬಂದಿದ್ದಂತಹ ರಾಮಚಂದ್ರ ಎಂದು ಖಚಿತಪಡಿಸುತ್ತಾರೆ.
ಮೇವು ತರಲು ಹೋದಂತಹ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸುಟ್ಟು ಕರಕಲಾಗಿದ್ದು ದೇಹ ಮತ್ತು ತಲೆ ಬೇರೆ ಬೇರೆ ಕಡೆ ಬಿದ್ದಿರುತ್ತವೆ. ಗ್ರಾಮದಿಂದ ದೂರದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಇಂತಹ ಘಟನೆ ನಡೆದಿರುವ ಕಾರಣ ತಡವಾಗಿ ಬೆಳಕಿಗೆ ಬಂದಿರುತ್ತದೆ.
ರಾಮಚಂದ್ರನ ಕುಟುಂಬದವರು ಇದಕ್ಕೆಲ್ಲ ಎಸ್ಕಾಂ ಕಾರಣ ಹಲವು ಬಾರಿ ಗ್ರಾಮದ ಜನರು ದೂರನ್ನು ನೀಡಿದರು ಸಹ ವಿದ್ಯುತ್ ತಂತಿಗಳನ್ನು ಸರಿಪಡಿಸದೆ ಎಲ್ಲೆಂದರಲ್ಲಿ ಬಿಟ್ಟಿದ್ದರು ಅದಕ್ಕಾಗಿ ಈ ರೀತಿ ಆಗಿರುವುದು ಎಂದು ದೂರಿದ್ದಾರೆ.
ಸದ್ಯ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಸ್ಕಾಂನ ಖಾನಾಪುರ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.