ಹುಬ್ಬಳ್ಳಿ: ಮನೆಯ ಮುಂದೇ ನಿಲ್ಲಬೇಡ ಎಂದಿದ್ದಕ್ಕೇ ಕಾಂಗ್ರೆಸ್ ಯುವ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸೋನಿಯಾ ಗಾಂಧಿನಗರದ ನಿಜಾಮುದ್ದಿನ ಪ್ಲಾಟ್ ನಲ್ಲಿ ನಡೆದಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಕಾಂಗ್ರೆಸ್ ಯುವ ಮುಖಂಡ ತೌಸಿಪ್ ಲಕ್ಕುಂಡಿ ಎನ್ನಲಾಗಿದೆ. ಇತ್ತೀಚೆಗಷ್ಟೆ ಸೊನಿಯಾಗಾಂದಿ ನಗರದಲ್ಲಿ ಮನೆಮಾಡಿಕೊಂಡಿದ್ದ ತೌಸಿಪ್ ಲಕ್ಕುಂಡಿಯ ಮನೆಯ ಬಳಿ ಪದೇ ಪದೇ ಐದಾರು ಜನರೊಂದಿಗೆ ಬಂದು ನಿಲ್ಲುತ್ತಿದ್ದ ಇಸ್ಮಾಯಿಲ್ ಹಾಗೂ ತೌಸಿಫ್ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
ಇದನ್ನೆ ಹಗೆ ಸಾಧಿಸಿದ ಇಸ್ಮಾಯಿಲ್ ಇಂದು ತೌಸೀಫ್ ನ ಮೇಲೆ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದಾನೆ.ಇನ್ನೂ ಘಟನೆ ಕುರಿತು ಮಾಹಿತಿ ಪಡೆದ ಬೇಂಡಿಗೇರಿ ಪೋಲಿಸ್ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಗಾಗಿ ಬಲೆ ಬೀಸಿದ್ದಾರೆ.ಘಟನೆಯಲ್ಲಿ ಗಾಯಗೊಂಡ ಕಾಂಗ್ರೆಸ್ ಮುಖಂಡನನ್ನು. ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ವರದಿ: ಚರಂತಯ್ಯ ಹಿರೇಮಠ.