31 ವರ್ಷದ ಮಹಿಳೆಯೊಬ್ಬಳು 13 ವರ್ಷದ ಬಾಲಕನಿಂದ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಅಮೆರಿಕದ ಒರ್ಲಾಂಡೊದಲ್ಲಿ ನಡೆದಿದೆ. ಆದರೆ ಅಪ್ರಾಪ್ತ ಬಾಲಕ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಜೈಲು ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಆಂಡ್ರಿಯಾ ಸೆರ್ರೆನೊ ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಈ ಹಿನ್ನೆಲೆಯಲ್ಲಿ ನಂಬಿಕೆ ದ್ರೋಹ ಮಾಡಿ ಬಾಲಕನನ್ನು ಅನೈತಿಕ ಚಟುವಟಿಕೆಗೆ ಬಳಸಿಕೊಂಡ ಆರೋಪದ ಮೇಲೆ ಫೌಂಟೇನ್ ಪೊಲೀಸರು ಆಂಡ್ರಿಯಾ ಸೆರ್ರೆನೊ ವಿರುದ್ಧ ಪ್ರಕರಣ ದಾಖಲಿಸಿದ್ದರು. ಲೈಂಗಿಕ ಕ್ರಿಯೆ ಬಗ್ಗೆ ಗೊತ್ತಿಲ್ಲದ ಬಾಲಕನನ್ನು ಪ್ರಚೋದಿಸಿ ಬಳಸಿಕೊಂಡಿದ್ದ ಪ್ರಕರಣದಿಂದ ದೋಷಮುಕ್ತಿ ಎಂದು ಘೋಷಿಸಲಾಗಿದ್ದು, ಇದರಿಂದ ಜೈಲಿಗೆ ಹೋಗುವ ಅಪಾಯದಿಂದ ಪಾರಾಗಿದ್ದಾಳೆ.