ಬೆಂಗಳೂರು: ರಾಮಮೂರ್ತಿ ನಗರನ ಹೊಯ್ಸಳ ನಗರದಲ್ಲಿ ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಭಯಾನಕ ಕೃತ್ಯ ನಡೆದಿದ್ದು, ಬಿಹಾರ ಮೂಲದ ಅಭಿಷೇಕ್ ಕುಮಾರ್ (25) ಎಂಬ ವ್ಯಕ್ತಿ ಆರೋಪಿ ಎಂದು ಗುರುತಿಸಲಾಗಿದೆ.
ಈ ಘಟನೆಯು ಸೋಮವಾರ ರಾತ್ರಿ 7.30ರ ಸುಮಾರಿಗೆ ಸಂಭವಿಸಿದೆ. ಆ ಸಮಯದಲ್ಲಿ ಬಾಲಕಿಯ ಪೋಷಕರು ಗಾರೆ ಕೆಲಸಕ್ಕೆ ಹೋಗಿದ್ದರು ಮತ್ತು ಮನೆಗೆ ಯಾರೂ ಇಲ್ಲದ ವೇಳೆ, ಅಭಿಷೇಕ್ ಬಾಲಕಿಯನ್ನು ಹೊತ್ತೊಯದು. ಬಳಿಕ, ಆಕೆ ಮೇಲೆ ಅತ್ಯಾಚಾರ ಎಸಗಿದನು.
ಅತ್ಯಾಚಾರವೆಸಗುವ ವೇಳೆ ಬಾಲಕಿ ನರಳಿ ನರಳಿ ಪ್ರಾಣ ಬಿಟ್ಟಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ, ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಅಭಿಷೇಕ್ ಕುಮಾರ್ನ್ನು ಬಂಧಿಸಲಾಗಿದೆ. ಆತ ಗಾರೆ ಕೆಲಸ ಮಾಡುವ ವ್ಯಕ್ತಿ ಎನ್ನಲಾಗಿದೆ.