ಸಿಂದಗಿ ತಾಲೂಕಿನ ಶ್ರೀ ಡಿ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಸಿಂದಗಿ ಟೌನ್ ಇದರ ಪರಿಸ್ಥಿತಿ ನೋಡಿದರೆ ಎದೆ ಜಲ್ ಎನ್ನುವ ರೀತಿ ಇದೆ.
ಇಲ್ಲಿಯ ವಿದ್ಯಾರ್ಥಿ ನಿಲಯದಲ್ಲಿ ಎಲ್ಲಿ ನೋಡಿದರೂ ಸೋರುತ್ತಿರುವ ಕೋಣೆಗಳು, ಶಿಥಿಲ ವ್ಯವಸ್ಥೆಯಿಂದ ಕೂಡಿದೆ. ಅಲ್ಲದೆ ಇಲ್ಲಿಯ ವಸತಿ ನಿಲಯಕ್ಕೆ ವಾರ್ಡನ್ ಆಗಿ ಕೆಲಸ ನಿರ್ವಹಿಸುವರು ಮಠಪತಿ ಎಂಬವರು ವಸತಿ ನಿಲಯಕ್ಕೆ ಬರುವುದು ತಿಂಗಳಿಗೆ ಒಮ್ಮೆ ಮಾತ್ರ. ಇಲ್ಲಿಯ ವಸತಿ ನಿಲಯಗಳ ಮೇಲಾಧಿಕಾರಿಯಾಗಿ ಶ್ರೀಮತಿ ಶಿವಲೀಲಾ ಕಣ್ಣೂರು ಅವರಿಗೆ ಇಲ್ಲಿಯ ಸಮಸ್ಯೆ ಬಗ್ಗೆ ಎಷ್ಟೇ ಬಾರಿ ದೂರು ನೀಡಿದರು ಕೂಡ ನಮಗೆ ಸಂಬಂಧವೇ ಇಲ್ಲ ಎಂಬಂತೆ ಕುಳಿತಿದ್ದಾರೆ.
ಸಾರ್ವಜನಿಕರು ಕರೆ ಮಾಡಿದರೆ ಶಿವಲೀಲಾ ಕಲ್ಲೂರ್ ರವರು ಕರೆಗೆ ಉತ್ತರಿಸುವುದೇ ಇಲ್ಲ ಸೋಂಬೇರಿ ವಾರ್ಡನ್ ಜೊತೆಗೆ ದಂಡಪಿಂಡ ರೀತಿ ಕೆಲಸ ಮಾಡುವ ಮೇಲಾಧಿಕಾರಿಗಳಿಗೆ ಯಾವ ಶಬ್ದದಿಂದ ಮಾತನಾಡಬೇಕು ಎಂಬುದು ತಿಳಿಯದಾಗಿದೆ.
ಇಲ್ಲಿಯ ವಿದ್ಯಾರ್ಥಿಗಳ ಪರಿಸ್ಥಿತಿ ಕೇಳಿದರೆ ಯಾವ ಒಬ್ಬ ಪಾಲಕರು ತಮ್ಮ ಮಕ್ಕಳಿಗೆ ಹಾಸ್ಟೆಲ್ನಲ್ಲಿ ಇರುವುದಕ್ಕೆ ಬಿಡುವುದಿಲ್ಲ ಏಕೆಂದರೆ ಇಲ್ಲಿಯ ಶೌಚಾಲಯಕ್ಕೆ ಹೋದರೆ ವಾಂತಿ ಬೇಧಿ ಬರುವುದು ಗ್ಯಾರಂಟಿ ಮತ್ತು ಅಡುಗೆ ಕೆಲಸದವರು ಇದ್ದರೂ ಕೂಡ ಅಲ್ಲಿಯ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಾರೆ ಮತ್ತು ಶೌಚಾಲಯ ಸ್ವಚ್ಛಗೊಳಿಸಲು ಮಕ್ಕಳೇ ಸ್ವಚ್ಛಗೊಳಿಸಬೇಕು ಪ್ರತಿದಿನ ಸರದಿಯಂತೆ ರೂಮಿಗೆ ಒಬ್ಬರು ಶೌಚಾಲಯ ಸ್ವಚ್ಛಗೊಳಿಸಬೇಕು ಇಲ್ಲಿಯ ಮಕ್ಕಳ ನರಕ ಯಾತನೆ ಹೇಳತಿರದು.
ವಸತಿ ನಿಲಯದಲ್ಲಿ ಇರುವ ಮಕ್ಕಳು ಹೇಳುವಂತೆ ಮಳೆ ಬಂದರೆ ಎಲ್ಲಿ ನೋಡಿದರೂ ಸೋರುವ ಕೋಣೆಗಳು ಕೆಲವೊಂದು ಸಲ ನಿಂತ ನೀರಿನಲ್ಲಿ ಮಲಗುವ ಸನ್ನಿವೇಶವೂ ಕೂಡ ಬಂದು ಒದಗಿದೆ ಎಂದು ಹೇಳಿದರು.
ಇದರ ಬಗ್ಗೆ ವಾರ್ಡನ್ಗೆ ಹೇಳಿದರೆ ಇರುವುದಾದರೆ ಇರಿ ಇಲ್ಲವೇ ಇಲ್ಲಿಂದ ಹೊರಟು ಹೋಗಿ ಎಂದು ಹೇಳುತ್ತಾರಂತೆ. ಬಡತನದಲ್ಲಿ ಇರುವ ವಿದ್ಯಾರ್ಥಿಗಳು ತಮ್ಮ ಸಂಕಟವನ್ನು ಯಾರ ಹತ್ತಿರ ಹೇಳಬೇಕು?
ಅಲ್ಲೇ ಕೆಲಸ ನಿರ್ವಹಿಸುವ ಅಡುಗೆ ಸಹಾಯಕರು ಮಕ್ಕಳ ಮೇಲೆ ಗದರಿ ಹೊಡೆಯಲು ಹೋಗುತ್ತಾರಂತೆ. ಇದರಿಂದ ಹೆದರಿದ ಮಕ್ಕಳು ಬಂದ ಎಲ್ಲ ಕಷ್ಟ ವನ್ನು ಸುಮ್ಮನೇ ನುಂಗಿ ಕುಳಿತಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಶಿವಲೀಲಾ ಕಣ್ಣೂರು ರವರೆ ನಿಮಗಿದು ಕಾಣುತ್ತಿಲ್ಲವೇ? ಇಲ್ಲಿನ ಅವ್ಯವಸ್ಥೆಗೆ ಕೊನೆಯೆಂದು? ಮಕ್ಕಳು ದೇವರ ಸಮಾನರು ಎನ್ನುತ್ತಾರೆ ಅಂತಹ ಮಕ್ಕಳನ್ನೇ ಇಂತಹ ಸಮಸ್ಯೆಗೆ ತಳ್ಳುತ್ತಿದ್ದಾರೆ ಎಂದರೆ ಇವರೆಂಥ ನಾಚಿಕೆ ಬಿಟ್ಟ ಭ್ರಷ್ಟ ಅಧಿಕಾರಿಗಳಿರಬೇಕು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅಂತಹ ನಮ್ಮ ದೇಶದ ಪ್ರಜೆಗಳು ಮುಂದೆ ದೇಶವನ್ನು ಹಾಗೂ ಅದರ ವ್ಯವಸ್ಥೆಯನ್ನು ಗೌರವಿಸ ಬೇಕೆ ಹೊರತು ಅದರ ಹವ್ಯವಸ್ಥೆಯಲ್ಲಿ ನೊಂದು, ಬೆಂದು ಸಮಾಜದ ವಿರೋಧಿಗಳಾಗಬಾರದು.
ಈ ವಿಚಾರದ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಮಕ್ಕಳ ಕಷ್ಟಕ್ಕೆ ನೆರವಾಗಬೇಕು ಮತ್ತು ಬಾಲಕರ ವಸತಿ ನಿಲಯದ ಅವ್ಯವಸ್ಥೆಗೆ ಕಾರಣರಾದ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂಬುದು ಪತ್ರಿಕೆಯ ಆಗ್ರಹವಾಗಿದೆ.
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…