ಯಲ್ಲಾಪುರ ತಾಲೂಕಿನಲ್ಲಿ ಬರುವ ಮಾಗೋಡು ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಸಾರ್ವಜನಿಕರಿಗೆ ಶಾಲಾ ಕಾಲೇಜುಗಳ ಮಕ್ಕಳಿಗೆ ಹಾಗೂ ಬಸ್ಸಿನಲ್ಲಿ ಪ್ರಯಾಣ ಮಾಡುವವರಿಗೆ ರಸ್ತೆಯ ಪಕ್ಕದಲ್ಲಿ ಒಂದು ಬಸ್ ತಂಗುದಾಣವನ್ನೂ ನಿರ್ಮಿಸಿದ್ದರು .ಯಲ್ಲಾಪುರ ದಿಂದ ಮಾಗೋಡು ತೆರಳುವ ಮುಕ್ಯ ರಸ್ತೆಯ ಪಕ್ಕದಲ್ಲಿ ಇದ್ದ ಬಸ್ ತಂಗು ದಾನ ಗಿಡ ಮರ ಕಸ ಕಡ್ಡಿ ಗೆದ್ದಲು ಹಿಡಿದು ದುಳಿಂದ ಕೂಡಿದ್ದು ಮೇಲ್ಛಾವಣಿಯ ಸಂಪೂರ್ಣ ಹಾಳಾಗಿದ್ದು ಯಾರೂ ಕೂಡ ಇದನ್ನು ಉಪಯೋಗಿಸುವಂತಿಲ್ಲ. ಇಲ್ಲಿನ ಶಾಲಾ ಕಾಲೇಜುಗಳ ಮಕ್ಕಳಿಗೆ ದಿನನಿತ್ಯ ಓಡಾಡುವ ಸಮಯದಲ್ಲಿ ತುಂಬಾ ತೊಂದರೆ ಅನುಭವಿಸುವಂತಾಗಿದೆ ಮಳೆಗಾಲದಲ್ಲಿ ಮಕ್ಕಳು ಒಳಗೆ ನಿಲ್ಲುವ ಹಾಗಿಲ್ಲ ಯಾವ ಕ್ಷಣದಲ್ಲಿ ಮೇಲ್ಛಾವಣಿಯ ಕುಸಿದು ಬೇಳುತ್ತೋ ಎಂಬ ಭಯದಿಂದ ಇದನ್ನು ಬಳಸುವುದೇ ಬಿಟ್ಟು ಬಿಟ್ಟಿದ್ದಾರೆ .ಸಂಬಂದ ಪಟ್ಟ ಅಧಿಕಾರಿಗಳು ಇತ್ತ ಕಡೆ ಯಾಕೆ ಗಮನ ಹರಿಸುತ್ತಿಲ್ಲ ಯಾಕೆ ಸರಿಪಡಿಸಿ ಕೊಡುತ್ತಿಲ್ಲ ತಿಳಿಯದು. ಇನ್ನೂ ಮುಂದಾದರು ಸರಿಯಾದ ವ್ಯವಸ್ಥೆ ಕಲ್ಪಿಸಿ ಕೊಡುತ್ತಾರಾ ಕಾದು ನೋಡಬೇಕಾಗಿದೆ.
ವರದಿ : ಶ್ರೀಪಾದ್ ಎಸ್ ಏಚ್