ಕುಂದಗೋಳ; ಜನರಿಗೆ ಶುದ್ದ ಕುಡಿಯುವ ನೀರು ಒದಗಿಸಲು ಸಲುವಾಗಿ ನಿರ್ಮಿಸಲಾಗಿದ್ದ ಶುದ್ದ ನೀರಿನ ಘಟಕ, ನಿರ್ವಹಣೆ ಇಲ್ಲದೆ ಪಾಳು ಬಿದ್ದು ಸಲಕರಣೆಗಳನ್ನು ತುಕ್ಕು ಹಿಡಿಯಲು ಆರಂಭಿಸಿವೆ.
ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಸಿಲಾಗಿದ, ಶುದ್ದ ನೀರಿನ ಘಟಕದ ದುಸ್ಥಿತಿ ಇದು. ಈಗಾಗಲೇ ಗ್ರಾಮದಲ್ಲಿ ಒಂದು ಶುದ್ದ ನೀರಿನ ಘಟಕ ಕಾರ್ಯನಿರ್ವಹಿಸುತ್ತಿದ್ದು, ಇನ್ನೊಂದು ಕಳೆದ ಒಂದೂವರೆ ವರ್ಷದಿಂದ ಹಾಗೆ ಪಾಳು ಬಿದ್ದಿದ್ದೆ ಅಂತೇ, ಇದು ಅಧಿಕಾರಿಗಳ ಗಮನಕ್ಕೆ ಬಂದಿಲವ್ವಾ?
ಕುಬಿಹಾಳ ಗ್ರಾಮದಲ್ಲಿ ಸುಮಾರು ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಗ್ರಾಮದಲ್ಲಿ ಎರಡು ಶುದ್ದ ನೀರಿನ ಘಟಕ ಸ್ಥಾಪಿಸಿದ್ದಾರೆ, ಆದರೆ ಅಧಿಕಾರಗಳ ಮಾತ್ರ ಸಮಸ್ಯೆಗಳ ಬಗ್ಗೆ ಗಮನ ಕೊಡದೆ ಜಾನ ಮೌನ ವಹಿಸಿ ಸುತ್ತಾರೆ ಅಂದರೆ ನಾಚಿಕೆಗೇಡಿನ ಸಂಗತಿ.
ಸರ್ಕಾರ ಲಕ್ಷ ಲಕ್ಷ ಹಣ ಮೂಲಭೂತ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ಕುಡಿಯುವ ನೀರಿಗೆ ನೀಡಿದ್ದು. ಆದರೆ ಈ ಅಧಿಕಾರಿಗಳ ಬೇಜವಾಬ್ದಾರಿತನವೋ ಅಥವಾ ನಿರ್ಲಕ್ಷತನವೋ ಒಂದು ಗೊತ್ತಿಲ್ಲ.
ಒಟ್ಟಿನಲ್ಲಿ ಪಾಳು ಬಿದ್ದ ಶುದ್ದ ನೀರಿನ ಘಟಕ ದುರಸ್ಥಿ ಸರಿಪಡಿಸುತ್ತಾರೋ ಅಥಾವ ಇಲ್ಲೋ ಅಂತ ಕಾದು ನೋಡಬೇಕು?
ಈ ಬಗ್ಗೆ ಅಧಿಕಾರ ಬಳಿ ಪ್ರಶ್ನೆ ಮಾಡಿದಾಗ ಶುದ್ದ ನೀರಿನ ಘಟಕ ಸ್ಥಳಾಂತರಸಲಾಗುತ್ತದೆ. ಈಗಿರುವ ಘಟಕ ಎದುರುಗಡೆ ಹೊಸದಾಗಿ ನಿರ್ಮಾಣ ಮಾಡಿ ಸಲಕರಣೆಗಳನ್ನು ಖರೀದಿಸಿ ನಿರ್ಮಾಣ ಮಾಡುತ್ತೇವೆ ಎಂದು ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಮಾಹಿತಿ ನೀಡಿದರು. ಹಾಗಾದರೆ ಈಗಿರುವ ಶುದ್ದ ನೀರಿನ ಘಟಕ ನಿರ್ವಹಣೆ ಮಾಡದೇ ಬೇಕಾ ಬಿಟ್ಟ ಖರ್ಚು ಮಾಡಲು ಸರಕಾರ ದುಡ್ಡು ಅಥವಾ ಕೊಳ್ಳೆ ಒಡೆದ ದುಡ್ಡಾ ಇವರುಗಳ ಮಾಡೋದು ನಿಜಕ್ಕೂ ದುರ್ಬಳಕೆ ಅಂತ ಸ್ಪಷ್ಟವಾಗಿ ಗೋಚರಿಸುತ್ತದೆ. ಅಧಿಕಾರ ಇದೆ ಅಂತ ಏನು ಬೇಕಾದರೂ ಮಾಡೋದು ಸರೀನಾ?
ವರದಿ; ಶಾನು ಯಲಿಗಾರ