ತಾಯಿ ನಾಯಿ ತನ್ನ ಪ್ರಜ್ಞಾಹೀನ ಮರಿಯನ್ನು ತನ್ನ ಬಾಯಲ್ಲಿ ಹಿಡಿದು ಸಮೀಪದ ಪಶುವೈದ್ಯಾಲಯಕ್ಕೆ ಕರೆದೊಯ್ದ ಘಟನೆಯ ವಿಡಿಯೋ ಡಾಕ್ಟರ್‌ಗಳನ್ನೂ ಹಾಗೂ ಜನರನ್ನು ಅಚ್ಚರಿಗೊಳಿಸಿದೆ. ವೀಡಿಯೋದಲ್ಲಿ ನಾಯಿ ತನ್ನ ಮರಿಯನ್ನು ಬಾಯಲ್ಲಿ ಹಿಡಿದು ನೇರವಾಗಿ ಆರೋಗ್ಯ ಕೇಂದ್ರಕ್ಕೆ ಹೋಗುವ ದೃಶ್ಯವಿದೆ.

ಈ ಘಟನೆ ಜನವರಿ 13ರಂದು ಟರ್ಕಿಯಲ್ಲಿನ ಬೇಯ್ಲಿಕ್‌ಡುಸು ಆಲ್ಫಾ ವೆಟರಿನರಿ ಕ್ಲಿನಿಕ್‌ನಲ್ಲಿ ನಡೆದಿದೆ. ತಾಯಿ ನಾಯಿ ತನ್ನ ಮರಿಯನ್ನು ಬಾಯಲ್ಲಿ ಹಿಡಿದು ಆತುರದಿಂದ ವೈದ್ಯರ ಸಹಾಯಕ್ಕಾಗಿ ಕ್ಲಿನಿಕ್‌ಗೆ ಕರೆದೊಯ್ದಿದೆ.

ವೀಡಿಯೋದಲ್ಲಿ ಏನಿದೆ?
ವೀಡಿಯೋವು ನಾಯಿ ತನ್ನ ಮರಿಯೊಂದಿಗೆ ಕ್ಲಿನಿಕ್‌ಗೆ ಹೋಗುತ್ತಿರುವ ದೃಶ್ಯದಿಂದ ಆರಂಭವಾಗುತ್ತದೆ. ತಾಯಿ ನಾಯಿ ತನ್ನ ಮರಿಯ ಜೀವವನ್ನು ರಕ್ಷಿಸಲು ಅಗತ್ಯ ವೈದ್ಯಕೀಯ ಸಹಾಯವನ್ನು ಪಡೆಯಲು ಸಮಯ ವೃಥಾ ಮಾಡದೆ, ಬಾಯಲ್ಲಿ ಹಿಡಿದು ಕ್ಲಿನಿಕ್ ಬಾಗಿಲಿಗೆ ತಲುಪಿದೆ.

ಮರಿ ಬದುಕಿ ಉಳಿಯಿತು
ತಾಯಿಯ ಪ್ರಯತ್ನ ವ್ಯರ್ಥವಾಗಿಲ್ಲ. ವೈದ್ಯರು ಮರಿಯನ್ನು ಪುನಜೀವ ನೀಡಲು ಯಶಸ್ವಿಯಾದರು. ಮರಿಯು ಪ್ರಜ್ಞಾಹೀನ ಮತ್ತು ತಾಪಮಾನ ಕಡಿಮೆಯಾದ ಸ್ಥಿತಿಯಲ್ಲಿ ಕ್ಲಿನಿಕ್‌ಗೆ ತಲುಪಿತ್ತು. ವರದಿಗಳ ಪ್ರಕಾರ, ಈ ಮರಿ ತನ್ನ ಸಹೋದರನೊಂದಿಗೆ ಈಗ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ತಾಯಿ ನಾಯಿ ಮತ್ತು ಈ ಎರಡು ಮರಿಗಳು ಈಗ ವೈದ್ಯಕೀಯ ತಪಾಸಣೆಯಡಿಯಲ್ಲಿ ಸಾಕಲ್ಪಡುತ್ತಿವೆ.

ವೈದ್ಯರ ಮಾತು
ಹೆಲ್ತ್‌ಕೇರ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿರುವ ಸ್ಟಾಫ್ ಸದಸ್ಯರೊಬ್ಬರು ನಾಯಿ ಬಾಗಿಲಲ್ಲಿ ನಿಂತಿರುವುದನ್ನು ನೋಡಿ ತಕ್ಷಣ ಬಾಗಿಲು ತೆರೆಯುತ್ತಾರಂತೆ. “ನಾಯಿ ತನ್ನ ಬಾಯಲ್ಲಿ ಮರಿ ಹಿಡಿದು ಬಂದು, ಮರಿಯನ್ನು ನೆಲಕ್ಕೆ ಇಡುತ್ತಿರುವುದನ್ನು ನೋಡಿದಾಗ ತಕ್ಷಣ ಪರಿಸ್ಥಿತಿಯನ್ನು ಮೊದಲು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ವೆಟರಿನರಿಯನ್ ಬತುರಾಲ್‌ಪ್ ಡೊಗನ್ ತಿಳಿಸಿದ್ದಾರೆ.

ಮರಿ “ಹಿಮದಂತೆ ಶೀತವಾಗಿತ್ತು” ಮತ್ತು ಚಲನೆ ಇಲ್ಲದೆ ಇತ್ತು. ಪ್ರಾರಂಭದಲ್ಲಿ ಡೊಗನ್ ಮತ್ತು ಅವರ ಸಹಚರ ಎಮಿರ್, ಮರಿ ಮೃತಪಟ್ಟಿರಬಹುದು ಎಂದು ಭಾವಿಸಿದ್ದರು. ಆದರೆ, ಮರಿ ಹೃದಯ ಚಟುವಟಿಕೆ ಎಷ್ಟು ನಿಧಾನವಾಗಿದ್ದರೂ ಅದು ಇನ್ನೂ ಬದುಕಿರುವುದು ದೃಢಪಟ್ಟಿತು.

“ಹೃದಯದ ಸ್ಪಂದನೆ ಇಷ್ಟು ನಿಧಾನವಾಗಿತ್ತು, ನಾನು ನನ್ನ ಸ್ಟೆಥಸ್ಕೋಪ್ ಮೂಲಕ ಅದನ್ನು ಕೇಳಲು ಸಾಧ್ಯವಾಗಲಿಲ್ಲ. ಆದರೆ, ಸೂಜಿಯಿಂದ ಪರಿಶೀಲಿಸಿದಾಗ ಹೃದಯ ನಿಧಾನವಾಗಿ ಬಡಿತ ಹೊಡೆಯುತ್ತಿರುವುದು ಗಮನಕ್ಕೆ ಬಂತು,” ಎಂದು ಡೊಗನ್ ಹೇಳಿದರು. ಈ ಸಣ್ಣ ಸುಳಿವಿನಿಂದ ಅವರು ಮರಿಯ ಜೀವ ಉಳಿಸಲು ಪ್ರಯತ್ನ ನಡೆಸಿದರು. ತಾಯಿ ನಾಯಿ ತನ್ನ ಮರಿಯು ಬದುಕುವ ನಿರೀಕ್ಷೆಯೊಂದಿಗೆ ಡಾಕ್ಟರ್‌ಗಳ ಬಾಗಿಲಿಗೆ ಕರೆದೊಯ್ದ ಉತ್ಸಾಹವು ಅರ್ಥಪೂರ್ಣವಾಯಿತು.

Leave a Reply

Your email address will not be published. Required fields are marked *

error: Content is protected !!