ಕುಡಿದ ಅಮಲಿನಲ್ಲಿ ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ) ಮಹಿಳೆಯ ತಲೆಯ ಮೇಲೆ ಮೂತ್ರ ವಿಸರಜಿಸಿದ ಘಟನೆ ಭಾನುವಾರ ಅಕಾಲ್ ತಖ್ತ್ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿ ತಿಳಿಸಿದ್ದಾರೆ.
ಮಹಿಳೆ ತನ್ನ ಪತಿ ರಾಜೇಶ್ ಕುಮಾರ್ ಜೊತೆ ಪ್ರಯಾಣಿಸುತ್ತಿದ್ದಳು, ಇಬ್ಬರೂ ಅಮೃತಸರ ಮೂಲದವರಾಗಿದ್ದಾರೆ. ಅಮೃತಸರದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಅಕಲ್ ತಖ್ತ್ ಎಕ್ಸ್‌ಪ್ರೆಸ್‌ನ ಎ1 ಕೋಚ್‌ನಲ್ಲಿ ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಜಿಆರ್‌ಪಿ ಅಧಿಕಾರಿ ತಿಳಿಸಿದ್ದಾರೆ. ಮಹಿಳೆಯ ಕಿರುಚಾಟದ ಶಬ್ದ ಕೇಳಿ ಸುತ್ತಮುತ್ತ ಜಮಾಯಿಸಿದ ಪ್ರಯಾಣಿಕರು ಕುಡಿದ ಮತ್ತಿನಲ್ಲಿದ್ದ ಟಿಟಿಇಯನ್ನು ಸೋಮವಾರ ರೈಲು ಲಕ್ನೋದ ಚಾರ್‌ಬಾಗ್ ರೈಲು ನಿಲ್ದಾಣವನ್ನು ತಲುಪಿದಾಗ ಜಿಆರ್‌ಪಿಗೆ ಒಪ್ಪಿಸಿದರೆ.
ಟಿಟಿಇಯನ್ನು ಬಿಹಾರದ ನಿವಾಸಿ ಮುನ್ನಾ ಕುಮಾರ್ ಎಂದು ಗುರುತಿಸಿಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.