ದೇಶ ಸೇವೆಗಾಗಿ ತನ್ನ 9 ತಿಂಗಳ ಮಗುವನ್ನೇ ಬಿಟ್ಟು ಹೋರಟಿರುವ ಮಹಿಳಾ ಯೋಧೆಯ ವಿಡಿಯೋ ಸೋಶಿಯಲ್​​​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಭಾವನಾತ್ಮಕ ವಿಡಿಯೋ ಎಂಥವರನ್ನೂ ಭಾವುಕರಾಗಿಸುತ್ತದೆ.
ಬಿಎಸ್‌ಎಫ್ ಮಹಿಳಾ ಯೋಧೆ ತನ್ನ 9 ತಿಂಗಳ ಮಗುವನ್ನು ದೇಶ ಸೇವೆಗಾಗಿ ಬಿಟ್ಟು ಹೋಗುತ್ತಿರುವ ವಿಡಿಯೋ ಎಲ್ಲರ ಕಣ್ಣಲ್ಲಿ ನೀರು ತರಿಸುವಂತಿದೆ. ಮಹಿಳೆ ರೈಲು ಹತ್ತುವಾಗ ತನ್ನ ಮಗು ತನ್ನ ತೋಳುಗಳಲ್ಲಿ ಅಳುತ್ತಿರುವುದನ್ನು ನೋಡಿ ಭಾವುಕಳಾಗುತ್ತಾಳೆ.
ರೈಲು ಹೊರಡುತ್ತಿದ್ದಂತೆ ಆಕೆಯ ಪತಿ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಮಹಿಳಾ ಸೈನಿಕ ಮತ್ತು ಆಕೆಯ ಮಗುವಿನ ಭಾವನಾತ್ಮಕ ವಿದಾಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

error: Content is protected !!