
ಶಿರಸಿ-ಶಿರಸಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಕೊಲೆ ನಡೆದಿದೆ. ಪ್ರಯಾಣಿಕರಿಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಶನಿವಾರ ಸಂಜೆ ಅಂಕೋಲಾದಿoದ ಹೊರಟ ಬಸ್ಸು ದಾವಣಗೆರೆ ಮೂಲಕ ಬೆಂಗಳೂರು ತಲುಪಬೇಕಿತ್ತು. ಆ ಬಸ್ಸಿನಲ್ಲಿ ಸಾಗರದ ಗಂಗಾಧರ ಎಂಬಾತರು ತಮ್ಮ ಪತ್ನಿ ಜೊತೆ ಪ್ರಯಾಣ ಮಾಡುತ್ತಿದ್ದರು. ಶಿರಸಿ ಹೊಸ ಬಸ್ ನಿಲ್ದಾಣದಲ್ಲಿ ಅವರು ಬಸ್ಸು ಹತ್ತಿದ್ದು, ಇನ್ನೂ ಟಿಕೆಟ್ ಪಡೆದಿರಲಿಲ್ಲ. ಬಸ್ಸು ಜೂ ಸರ್ಕಲ್ ದಾಡಿ ಪಂಡಿತ್ ಆಸ್ಪತ್ರೆ ಬಳಿ ಬರುವ ವೇಳೆಗೆ ಶಿರಸಿ ದುಂಡಸಿನಗರದ ಪ್ರೀತಂ ಹಾಗೂ ಗಂಗಾಧರ ನಡುವೆ ಜಗಳ ಶುರುವಾಯಿತು.
ಈ ವೇಳೆ ಅಕ್ಕಪಕ್ಕದಲ್ಲಿದ್ದ ಪ್ರಯಾಣಿಕರು ಜಗಳ ಬಿಡಿಸುವ ಪ್ರಯತ್ನ ಮಾಡಿದರು. ಆದರೆ, ಅದು ಫಲ ಕೊಡಲಿಲ್ಲ. ಸಿಟ್ಟಾದ ಪ್ರೀತಂ ತಮ್ಮ ಬಳಿಯಿದ್ದ ಚಾಕುವಿನಿಂದ ಗಂಗಾಧರ ಅವರ ಎದೆಗೆ ಚುಚ್ಚಿದರು. ರಕ್ತದ ಮೊಡವಿನಲ್ಲಿ ಹೊರಳಾಡಿ ಗಂಗಾಧರ ಕೊನೆ ಉಸಿರೆಳೆದರು. ಇದಾದ ನಂತರ ಪ್ರೀತಂ ಬಸ್ಸಿನಿಂದ ಕೆಳಗೆ ಹಾರಿ ಓಡಿ ಹೋದರು. ಪೊಲೀಸರು ಆಗಮಿಸಿ ಕೊಲೆಗಾರನ ಹುಡುಕಾಟ ನಡೆಸಿದ್ದಾರೆ.ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಶವವನ್ನು ಇರಿಸಿದ್ದು, ಆಸ್ಪತ್ರೆಗೆ ಸಿರ್ಸಿ ಡಿ.ಎಸ್.ಪಿ ಕೆ.ಎಲ್.ಗಣೇಶ್ ಬೇಟಿ ನೀಡಿ, ಮಾಹಿತಿ ಕಲೆ ಹಾಕಿ ಕೋಲೆಗಾರನ ಪತ್ತೆಗೆ ಬಲೆ ಬೀಸಿ ಅರ್ಧ ಗಂಟೆಯಲ್ಲಿ ಕೋಲೆಗಾರ ನ ಅರೆಸ್ಟ್ ಮಾಡಿದ್ದಾರೆ.