ಕೆ ಶ್ರೀಜಾ (48) ವಯಕೋಮ್ನ ಪೊಲಸ್ಸೆರಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲಸದ ಹೊರೆ ತಾಳಲಾರದೆ ಬಡ್ತಿ ರದ್ದುಗೊಳಿಸುವಂತೆ ಶಿಕ್ಷಣ ಸಚಿವರಿಗೆ ಶ್ರೀಜಾ ಅವರು ಮನವಿ ಮಾಡಿದ್ದರು. ಆದರೆ, ಮನವಿಯನ್ನು ತಿರಸ್ಕರಿಸಿದ ಪರಿಣಾಮ ಆಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ಸಂಬಂಧಿಕರು ದೂರಿದ್ದಾರೆ.
ವೈಯಕಂ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶ್ರೀಜಾ ಅವರು ಜೂ.1ರಂದು ಕೀಜೂರು ಜಿಎಲ್‌ಪಿಎಸ್ ಮುಖ್ಯೋಪಾಧ್ಯಾಯಿನಿಯಾಗಿ ಬಡ್ತಿ ಹೊಂದಿದ್ದರು. ಮರುದಿನವೇ ಕೆಲಸಕ್ಕೆ ಸೇರಿದ್ದರು. ಹೆಚ್ಚಿನ ಜವಾಬ್ದಾರಿಯುತ ಕೆಲಸದ ಒತ್ತಡ ತಾಳಲಾರದೆ ರಜೆ ತೆಗೆದುಕೊಂಡಿದ್ದರು. ಇದಾದ ಬಳಿಕ ಜುಲೈ 7 ರಂದು ಶಿಕ್ಷಣ ಸಚಿವರಿಗೆ ಅರ್ಜಿಯನ್ನು ಸಲ್ಲಿಸಿ ತನ್ನ ಪತಿಯ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಬಡ್ತಿಯನ್ನು ರದ್ದುಗೊಳಿಸುವಂತೆ ಕೇಳಿದ್ದರು. ಆಕೆ ಹಿಂದೆ ವೈಯಕಂನಲ್ಲಿ ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಿಸಬೇಕೆಂಬುದು ಆಕೆಯ ಬೇಡಿಕೆಯಾಗಿತ್ತು. ಆದರೆ, ಅರ್ಜಿಯನ್ನು ಪರಿಗಣಿಸಲು ನಿಯಮದಲ್ಲಿ ಅವಕಾಶವಿಲ್ಲ ಎಂದು ಕುರವಿಲಂಗಾಡ್ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಜಾ ಅವರಿಗೆ ಉತ್ತರಿಸಿದ್ದರು.
ಮನವಿ ತಿರಸ್ಕರಿಸಿದ್ದರಿಂದ ತೀವ್ರವಾಗಿ ಮನನೊಂದಿದ್ದ ಶ್ರೀಜಾ ಕೆಲವು ದಿನಗಳವರೆಗೆ ಸರಿ ಹೋಗಬಹುದು ಅಂತಾ ಹೇಗೋ ಕೆಲಸ ಮಾಡಿಕೊಂಡು ಬಂದಿದ್ದರು. ಆದರೆ, ಕೆಲಸದ ಹೊರೆ ಕಡಿಮೆಯಾಗದ ಕಾರಣ, ತೀವ್ರವಾಗಿ ಮನನೊಂದು ಶುಕ್ರವಾರ ಆತ್ಮಹತ್ಯೆಯ ಮಾಡಿಕೊಂಡ ಘಟನೆ ಕೇರಳದ ವಯಕೋಮ್ನಲ್ಲಿ ನಡೆದಿದೆ.