ಇಂಡಿ: ತಾಲೂಕಿನ ಬುಯ್ಯಾರ ಗ್ರಾಮದಲ್ಲಿ ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ! ನಿನ್ನೆ ಸಾಯಂಕಾಲ ಸುಮಾರು ಆರು ಗಂಟೆಗೆ ಕ್ಷುಲ್ಲಕ ಕಾರಣಕ್ಕಾಗಿ ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ದಲಿತ ಯುವಕ ತಾನು ತನ್ನ ಶರ್ಟ್ ಕಾಲರ್ ಅನ್ನು ಸರಿಪಡಿಸಿ ಕೊಳ್ಳುವ ಸಮಯದಲ್ಲಿ, ಊರಿನ ಕೆಲವು ಸವರ್ಣಿಯರ ಗುಂಪೊಂದು, ನಮಗೆ ನೋಡಿ ಶರ್ಟ್ ಕಾಲರ ಏರಿಸುತ್ತಿಯಾ.?, ಎಂದು ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ ಹಿಗ್ಗಾ ಮುಗ್ಗ ಥಳಿಸಿರುವ ಘಟನೆ ಬುಯ್ಯಾರ ಗ್ರಾಮದಲ್ಲಿ ನಡೆದಿದೆ.
ಅದಲ್ಲದೆ ಪಿಸ್ತೂಲ್ ಗನ್, ಮಚ್ಚು, ತೋರಿಸಿ. ನೀನೇನಾದರಾ ಪೊಲೀಸ್ ಹತ್ರ ಹೋದ್ರೆ ನಿನಗೂ ನಿನ್ನ್ ತಮ್ಮನಿಗೂ ಶೂಟ್ ಮಾಡುತ್ತೇನೆ ಎಂದು ಧಮ್ಕಿ ಹಾಕಿರುವ ಬಗ್ಗೆ ಸ್ವತಃ ಯುವಕನೇ ಹೇಳಿಕೊಂಡಿದ್ದಾನೆ. ಹಾಗೂ ಜಾತಿ ನಿಂದನೆ, ಮಾಡುವ ಜನರು ಇನ್ನು ಈ ದೇಶದಲ್ಲಿ ಇದಾರಾ… ಎಂದು ನೊಂದ ಯುವಕರು ಕೇಳಿದರೆ.
ನಾವು ಮೊದಲಾದರೂ ಒಂದು ಸಲ. ಅವರ ಮೇಲೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರುಕೊಟ್ಟಿರುತ್ತೇವೆ. ನಿನ್ನೆ ಸಹ ತಳವಾರ ಸಮಾಜದ ಯುವಕರ ಮೇಲೆ ಅಂದರೆ ಮಲ್ಲು ಕುಮಸಗಿ, ಪ್ರೀತಮ ಕುಮಸಗಿ, ರವಿ ಪಂಚಾಯತಿ. ಮಂಜುನಾಥ ಪಂಚಾಯತಿ, ಸಚಿನ ನಾಟಿಕಾರ, ಪರಶುರಾಮ ನಾಟಿಕಾರ, ರವಿ ದೊಡ್ಡಮನಿ, ಇನ್ನು ಅನೇಕರ ಮೇಲೆ ದೂರು ಕೊಟ್ಟಿದ್ದೇವೆ, ಆದರು ಇನ್ನು ಕ್ರಮ ಕೈಗೊಂಡಿಲ್ಲ. ಇದೆ ರೀತಿ ಆದರೆ ನಾವು ವಿಜಯಪುರ ಎಸ್, ಪಿ ಆಫೀಸ್ ಗೆ ಹೋಗುತ್ತೇವೆ ಎಂದು. ನೊಂದ ರೇವಮ್ಮ ಅರಕೇರಿ, ಆಕಾಶ ಅರಕೇರಿ, ಶ್ರೀಕಾಂತ ಅರಕೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವರದಿ:ಸಂಗಪ್ಪ ಚಲವಾದಿ
ಭ್ರಷ್ಟಾಚಾರ ವಿರುದ್ಧ ಹೋರಾಟದಲ್ಲಿ ಸರ್ಕಾರ ಮತ್ತೊಂದು ಭರ್ಜರಿ ಹೆಜ್ಜೆ ಇಟ್ಟಿದ್ದು, ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯಲ್ಲಿ ಹಿರಿಯ ಅಧಿಕಾರಿ…
ಉತ್ತರ ಕನ್ನಡ/ ರಾಮನಗರ: ಸರಾಯಿ ಕೊಡಿಸದ ಕಾರಣ ಸ್ನೇಹಿತ ಬೈಕ್ ಜೊತೆ ಪರಾರಿಯಾಗಿದ್ದ ಜೊಯಿಡಾದ ಪ್ರವೀಣ ಸುಧೀರ್'ರನ್ನು ಪೊಲೀಸರು ಬಂಧಿಸಿದ್ದಾರೆ.…
ಶಿರಸಿ: ಜಮೀನು ವ್ಯಾಜ್ಯದ ವಿಷಯವಾಗಿ ವ್ಯಕ್ತಿಯೊಬ್ಬರ ಕೊಲೆಗೆ ಪ್ರಯತ್ನಿಸಿದ ಆರೋಪಿ ಪರಮೇಶ್ವರ ಪಿಳ್ಳೆ ಅಪರಾಧಿ ಎಂದು ಸಾಭೀತಾಗಿದೆ. ಈ ಹಿನ್ನಲೆ…
ಉತ್ತರ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ 5ರಂದು ಬಾಬು ಜಗಜೀವನ ರಾಮ್ ಜಯಂತಿ ಹಾಗೂ ಏಪ್ರಿಲ್ 14ರಂದು ಬಿ ಆರ್ ಅಂಬೇಡ್ಕರ್…
ಮನೆಯಲ್ಲಿಟ್ಟಿದ್ದ ಕಳೆನಾಶಕವನ್ನು ಜ್ಯೂಸ್ ಎಂದು ತಪ್ಪಾಗಿ ಗ್ರಹಿಸಿ ಕುಡಿದ ಪರಿಣಾಮ 14 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬ್ಯಾಟರಾಯನಪುರ…
ನಗರದಲ್ಲಿ ಪೊಲೀಸರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಡಾ. ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ನಡೆದ…