ಶೀಲ ಶಂಕಿಸಿ ಪತಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಾದಪುರ ಗ್ರಾಮದಲ್ಲಿ ನಡೆದಿದೆ.
ಪವಿತ್ರಾ (22)ಕೊಲೆಯಾದ ಮಹಿಳೆ, ಮಾನ್ವಿ ಬಳಿಯ ಇಟ್ಟಿಗೆ ತಯಾರಿಕಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಪತ್ನಿ ಪವಿತ್ರಾ ಹಾಗೂ ಆರೋಪಿ ಪತಿ ನಾಗರಾಜ್, ಕಳೆದೊಂದು ವರ್ಷದ ಹಿಂದಷ್ಟೆ ಪವಿತ್ರಾಳನ್ನ ಮದುವೆಯಾಗಿದ್ದ. ಇತ್ತೀಚೆಗೆ ನಿತ್ಯ ಪತ್ನಿ ಶೀಲ ಶಂಕಿಸಿ ಕಿರುಕುಳ ಕೊಡುತ್ತಿದ್ದು, ಫೆ.23 ರಾತ್ರಿ ಮತ್ತೆ ಪತ್ನಿ ಪವಿತ್ರಾ ಜೊತೆ ಕಿರಿಕ್ ಮಾಡಿದ್ದಾನೆ. ಈ ವೇಳೆ ಪತಿ ನಾಗರಾಜ್ ಆಕೆಯನ್ನು ಹೊಡೆದು ಗೋಡೆಗೆ ತಳ್ಳಿದ್ದಾನೆ. ಇದರಿಂದ ತಲೆಗೆ ಪೆಟ್ಟು ಬಿದ್ದು ಪವಿತ್ರಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸದ್ಯ ಆರೋಪಿ ನಾಗರಾಜ್ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.