ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಯುವತಿ ಒಬ್ಬರಿಗೆ ಮಾರ್ಚ್ 2ನೇ ತಾರೀಕು ಮದುವೆ ನಿಶ್ಚಯವಾಗಿರುತ್ತದೆ ಇದೇ ಕಾರಣದಿಂದಾಗಿ ಸುಂದರವಾಗಿ ಕಾಣಿಸಿಕೊಳ್ಳಲು ಯುವತಿ 10 ದಿನ ಮೊದಲೇ ಬ್ಯೂಟಿ ಪಾರ್ಲರ್ಗೆ ಹೋಗಿ ಫೇಶಿಯಲ್ ಮಾಡಿಸಿಕೊಂಡಿರುತ್ತಾರೆ. ಇದನ್ನು ಮಾಡಿಸಿಕೊಂಡ ಮರುದಿನವೇ ಅವರಿಗೆ ಅಚ್ಚರಿಯೊಂದು ಕಾದಿರುತ್ತದೆ. ಅದೇನೆಂದರೆ, ಸುಂದರವಾಗಬೇಕಿದ್ದ ಮುಖ ವಿಕಾರವಾಗಿರುತ್ತದೆ.
ಫೇಶಿಯಲ್ ಮಾಡಿಸಿಕೊಂಡ ಕಾರಣ ಮುಖವೆಲ್ಲ ಸುಟ್ಟಂತಾಗಿ ಕಪ್ಪಾಗುವುದಲ್ಲದೆ ಊದಿಕೊಂಡಿರುತ್ತದೆ. ಈ ವಿಚಾರವನ್ನು ತಿಳಿದ ಗಂಡಿನ ಕಡೆಯವರು ಮದುವೆಯನ್ನು ಕ್ಯಾನ್ಸಲ್ ಮಾಡಲು ಮುಂದಾಗುತ್ತಾರೆ ನಂತರ ಯುವತಿಯು ಬ್ಯೂಟಿ ಪಾರ್ಲರ್ ಅವರ ವಿರುದ್ಧ ದೂರನ್ನು ದಾಖಲಿಸಿದ್ದು ಮಾತುಕತೆಯಲ್ಲಿ ರಜೆ ಮಾಡಿಕೊಂಡಿರುತ್ತಾರೆ. ಮಹಿಳೆಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಕೆಮಿಕಲ್ ರಿಯಾಕ್ಷನ್ ನಿಂದ ಈ ರೀತಿ ಆಗಿರುವುದು ಮೇಕಪ್ ಮಾಡುವ ಮೊದಲು ಅವರ ಚರ್ಮದ ಬಗ್ಗೆ ತಿಳಿಯಬೇಕು ಹಾಗೂ ಅವರು ಯಾವ ಕ್ರೀಮ್ಗಳನ್ನು ಬಳಸುತ್ತಿದ್ದಾರೆ ಎಂದು ಅರಿತು ಮೇಕಪ್ ಮಾಡಬೇಕು ಇಲ್ಲವಾದಲ್ಲಿ ಇಂತಹ ಸಮಸ್ಯೆಗಳು ಆಗುತ್ತವೆ ಎಂದು ತಿಳಿಸಿರುತ್ತಾರೆ. ಹಾಗೂ ಚಿಕಿತ್ಸೆ ನೀಡಿದ ಕೆಲವು ದಿನಗಳ ಬಳಿಕ ಮಹಿಳೆಯ ಮುಖ ಮೊದಲಿನಂತೆ ಆಗುವುದು ಎಂದು ವೈದ್ಯರು ಹೇಳಿರುತ್ತಾರೆ.
ಗಂಡಿನ ಕಡೆಯವರು ಯುವತಿಯ ಸಂಬಂಧಿಕರಾಗಿದ್ದ ಕಾರಣ ಈ ವಿಚಾರವನ್ನು ತಿಳಿದ ಮೇಲೆ ಮದುವೆಯನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿ ನಂತರ ಮಾಡೋಣ ಎಂದು ಒಪ್ಪಿಕೊಂಡಿರುತ್ತಾರೆ.
ಒಟ್ಟಿನಲ್ಲಿ ಮಹಿಳೆಗೆ ಮೇಕಪ್ ಮಾಡಿದ ಅವಾಂತರದ ವಿಚಾರವೀಗ ವೈದ್ಯರು ನೀಡಿದ ಭರವಸೆಯ ಮೇಲೆ ಹಾಗೂ ಗಂಡಿನವರು ಪುನಹ ಮದುವೆಗೆ ಒಪ್ಪಿರುವ ಕಾರಣ ಈ ಪ್ರಕರಣವು ಸುಖಾಂತ್ಯ ಕಂಡಿದೆ ಎಂದು ಹೇಳಬಹುದು.