ವೈದ್ಯರೊಬ್ಬರ ಅಪ್ರಾಪ್ತ ಮಗಳ ಮೇಲೆ ಆಕೆಯ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ಉತ್ತರಪ್ರದೇಶದ ಕಾನ್ಪುರದ ಬರ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಹುಕ್ಕಾ ಬಾರ್‌ನಲ್ಲಿ ನಡೆದಿದೆ.
ಇಲ್ಲಿನ ಬರ್ರಾ ನಿವಾಸಿಯಾಗಿರುವ ಇನ್‌ಸ್ಟಾಗ್ರಾಮ್ ಸ್ನೇಹಿತ ತನ್ನ ಮಗಳನ್ನು ಹುಕ್ಕಾ ಬಾರ್‌ಗೆ ಆಹ್ವಾನಿಸಿದ್ದನು. ಬಾರ್‌ನಲ್ಲಿ ಆಕೆಯ ಸ್ನೇಹಿತರು ಆಕೆಗೆ ನಿದ್ರೆ ಮಾತ್ರೆ ಹಾಕಿರುವ ತಂಪು ಪಾನೀಯವನ್ನು ಕುಡಿಯುವಂತೆ ಒತ್ತಾಯಿಸಿದ್ದಾರೆ. ಈಕೆ ಹಲವು ಬಾರಿ ನಿರಾಕರಿಸಿದರೂ ಆಕೆಯ ಸ್ನೇಹಿತರು ಕುಡಿಯುವಂತೆ ಒತ್ತಾಯಿಸಿದ್ದರು. ನಂತರ ಬಾಲಕಿ ಪ್ರಜ್ಞಾಹೀನಳಾಗಿದ್ದಾಳೆ. ಈ ವೇಳೆ ಆಕೆಯ ಸ್ನೇಹಿತ ಹಾಗೂ ಮತ್ತು ಆತನ ಗೆಳೆಯರು ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ತಂದೆ ಆರೋಪಿಸಿದ್ದಾರೆ.
ಈ ವೇಳೆ ಬಾಲಕಿಯು ಪ್ರತಿರೋಧ ವ್ಯಕ್ತಪಡಿಸಿದ್ದು, ಆಗ ಯುವಕರು ಆಕೆಯ ಕೆನ್ನೆ ಮತ್ತು ಹಣೆಯ ಮೇಲೆ ಗಾಯಗೊಳಿಸಿದ್ದಾರೆ. ಬಳಿಕ ಬಾಲಕಿ ಹೇಗೋ ಅವರ ಕೈಯಿಂದ ತಪ್ಪಿಸಿಕೊಂಡು ತನ್ನ ಮನೆ ಆಗಮಿಸಿದ್ದಾಳೆ. ಆದ ಘಟನೆ ಬಗ್ಗೆ ತನ್ನ ತಂದೆಯಲ್ಲಿ ವಿವರಿಸಿದ್ದಾಳೆ. ಅಷ್ಟೇ ಅಲ್ಲದೆ ಆರೋಪಿ ಇನ್‌ಸ್ಟಾಗ್ರಾಮ್ ಸ್ನೇಹಿತ ನನ್ನ ಅಶ್ಲೀಲ ವಿಡಿಯೋ ಸೆರೆ ಹಿಡಿದು ಕೆಲವು ದಿನಗಳಿಂದ ಬ್ಲಾಕ್‌ಮೇಲ್ ಮಾಡುತ್ತಿದ್ದ. ಜೊತೆಗೆ ಅಶ್ಲೀಲ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ತನ್ನ ತಂದೆ ಬಳಿ ಹೇಳಿದ್ದಾಳೆ.
ಕಳೆದ ಶುಕ್ರವಾದ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಬಾಲಕಿಯ ತಂದೆ ಎಂಟು ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ.